alex Certify
ಕನ್ನಡ ದುನಿಯಾ       Mobile App
       

Kannada Duniya

5 ವರ್ಷದಲ್ಲಿ 6.4 ಲಕ್ಷ ನೌಕರಿಗಳು ಕೈ ತಪ್ಪಿಹೋಗಲಿವೆ

53058485.cmsಅಮೆರಿಕದ ಎಚ್ಎಫ್ಎಸ್ ಸಂಶೋಧನಾ ಕೇಂದ್ರದ ಪ್ರಕಾರ, ಮುಂಬರುವ 5 ವರ್ಷದಲ್ಲಿ ಭಾರತದ ಐಟಿ ಇಂಡಸ್ಟ್ರಿಯ 6.4 ಲಕ್ಷ ನೌಕರಿಗಳು ಕೈತಪ್ಪಿ ಹೋಗಲಿವೆ. ಈ ನೌಕರಿಗಳಲ್ಲಿ ಮನುಷ್ಯರ ಸ್ಥಾನವನ್ನು ರೊಬೊಟ್ ಗಳು ಕಬಳಿಸಲಿವೆ.

ಈ ಸಂಶೋಧನಾ ಕೇಂದ್ರದ ಪ್ರಕಾರ 2021ರ ವರೆಗೆ ಇಡೀ ಜಗತ್ತಿನಲ್ಲಿ ಪ್ರತಿಶತ 9ರಷ್ಟು ಅಂದರೆ ಸುಮಾರು 14 ಲಕ್ಷ ನೌಕರಿಗಳು ನೌಕರರ ಕೈತಪ್ಪಲಿವೆ. ಫಿಲಿಪಿನ್ಸ್, ಯುನೈಟೆಡ್ ಕಿಂಗ್ ಡಮ್ ಮತ್ತು ಅಮೆರಿಕಾ ದೇಶದಲ್ಲಿ ಕೂಡ ಅನೇಕರು ನೌಕರಿ ಕಳೆದುಕೊಳ್ಳಲಿದ್ದಾರೆ.

ನೆಸ್ಕಾಮ್ ನ ಉಪಾಧ್ಯಕ್ಷ  ಸಂಗೀತಾ ಗುಪ್ತಾ ಅವರು, “ರೊಬೊಟ್ ಬರುವುದರಿಂದ ಅನೇಕ ನೌಕರರ ಮೇಲೆ ಪ್ರಭಾವ ಬೀರುವುದು ನಿಜ. ಆದರೆ ತಂತ್ರಜ್ಞಾನದ ಬಳಕೆಯಿಂದ ಕೆಲಸ ಮಾಡುವುದರಿಂದ ಅನೇಕ ನೌಕರಿಗಳು ಕೂಡ ಹುಟ್ಟಿಕೊಳ್ಳುತ್ತವೆ” ಎಂದು ಹೇಳಿದ್ದಾರೆ.

ಎಚ್ಎಫ್ಎಸ್ ನೀಡಿರುವ ವರದಿಯ ಪ್ರಕಾರ, ‘ಲೊ ಸ್ಕಿಲ್ಡ್’ ನೌಕರಿಗಳು ಪ್ರತಿಶತ 30ರಷ್ಟು ಕಡಿಮೆಯಾಗಲಿದೆ. ‘ಮೀಡಿಯಮ್ ಸ್ಕಿಲ್ಡ್’ ಮತ್ತು ‘ಹೈ ಸ್ಕಿಲ್ಡ್’ ನೌಕರಿಗಳು ಪ್ರತಿಶತ 56ರಷ್ಟು ವೃದ್ದಿಯಾಗಲಿವೆ.

“ಇಷ್ಟೇ ನೌಕರಿಗಳು ಹೋಗುತ್ತವೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಒಂದೆಡೆ ನೌಕರಿ ಇಲ್ಲವಾದರೆ ಇನ್ನೊಂದು ಕ್ಷೇತ್ರದಲ್ಲಿ ನೌಕರರ ಅವಶ್ಯಕತೆ ಇದ್ದೇ ಇರುತ್ತದೆ” ಎಂದಿದ್ದಾರೆ ಸಂಗೀತಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...