alex Certify
ಕನ್ನಡ ದುನಿಯಾ       Mobile App
       

Kannada Duniya

ರೈಫಲ್ ಕದ್ದು ಉಗ್ರ ಸಂಘಟನೆ ಸೇರಿದ್ದಾನೆ ಪೇದೆ

jk

ನಾಲ್ಕು ರೈಫಲ್ ಗಳನ್ನು ಕದ್ದು ಓಡಿ ಹೋಗಿರುವ ಜಮ್ಮು-ಕಾಶ್ಮೀರದ ಪೊಲೀಸ್ ಪೇದೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿದ್ದಾನೆ. ಸೈಯದ್ ನವೀದ್ ಮುಷ್ತಾಕ್ ಶಾ ಉಗ್ರಸಂಘಟನೆ ಸೇರಿರುವ ಪೇದೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖಂಡ ಬುರ್ಹಾನುದ್ದೀನ್ ಪೇದೆಯನ್ನು ಸ್ವಾಗತಿಸಿದ್ದಲ್ಲದೆ, ಆತ ಮಾಡಿರುವ ಕೃತ್ಯವನ್ನು ಕೊಂಡಾಡಿದ್ದಾನೆ.

ಪೇದೆ ನವೀದ್ ನಂತಹ ಧೈರ್ಯವಂತರು ಹಿಜ್ಬುಲ್ ಸಂಘಟನೆ ಸೇರುತ್ತಲೇ ಇರಬೇಕು ಅಂತಾ ಹೇಳಿದ್ದಾನೆ. ನವೀದ್, ಚಾಂದ್ ಪೋರಾ ಗ್ರಾಮದಲ್ಲಿ ‘ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ’ದ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸ್ತಾ ಇದ್ದ. ಶನಿವಾರ ತನ್ನ ಬಳಿಯಿದ್ದ ಒಂದು ರೈಫಲ್ ಹಾಗೂ ಕಚೇರಿಯಲ್ಲಿದ್ದ ಇತರ 3 ರೈಫಲ್ ಗಳನ್ನು ತೆಗೆದುಕೊಂಡು ನವೀದ್ ಎಸ್ಕೇಪ್ ಆಗಿದ್ದಾನೆ.

2016ರ ಜನವರಿಯಲ್ಲೂ ಶಾಕೂರ್ ಅಹ್ಮದ್ ಎಂಬ ಪೊಲೀಸ್ ಪೇದೆ ನಾಲ್ಕು ರೈಫಲ್ ಗಳನ್ನು ಅಪಹರಿಸಿ ಭಯೋತ್ಪಾದಕರ ಜೊತೆಗೆ ಸೇರಿಕೊಂಡಿದ್ದ. 2015 ರಲ್ಲಿ 2 ರೈಫಲ್ ಗಳನ್ನು ತೆಗೆದುಕೊಂಡು ಓಡಿ ಹೋಗಿದ್ದ ಮತ್ತೊಬ್ಬ ಕೂಡಾ ಹಿಜ್ಬುಲ್ ಸಂಘಟನೆಯನ್ನು ಸೇರಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...