alex Certify
ಕನ್ನಡ ದುನಿಯಾ       Mobile App
       

Kannada Duniya

10 ಭದ್ರತಾ ಸಿಬ್ಬಂದಿಯ ಪ್ರಾಣ ಉಳಿಸಿದ ಅಧಿಕಾರಿ

ಜಮ್ಮು-ಕಾಶ್ಮೀರದ ಸೋಪೋರ್ ನಲ್ಲಿ ಪೊಲೀಸರ ಸಮಯ ಪ್ರಜ್ಞೆಯಿಂದ 10 ಮಂದಿ ಭದ್ರತಾ ಸಿಬ್ಬಂದಿಯ ಪ್ರಾಣ ಉಳಿದಿದೆ. ಸೆಕ್ಯೂರಿಟಿ ವಾಹನದಲ್ಲಿ ಇಟ್ಟಿದ್ದ ಗ್ರೆನೇಡ್ ಅನ್ನು ವಿಶೇಷ ಪೊಲೀಸ್ ಅಧಿಕಾರಿ ಅಹ್ಮದ್ ಲೋನ್ (ಹೆಸರು ಬದಲಾಯಿಸಲಾಗಿದೆ) ತೆಗೆದು ಹೊರಕ್ಕೆಸೆಯುವ ಮೂಲಕ ಸಹೋದ್ಯೋಗಿಗಳನ್ನು ಬಚಾವ್ ಮಾಡಿದ್ದಾರೆ.

ಇನ್ನೋರ್ವ ಅಧಿಕಾರಿ ಸಲೀಮ್ ಬಶೀರ್ ತಕ್ಷಣವೇ ವಾಹನದ ಬಾಗಿಲು ಬಂದ್ ಮಾಡುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ. ಅಹ್ಮದ್ ಲೋನ್ ಮತ್ತು ಉಳಿದ 10 ಭದ್ರತಾ ಸಿಬ್ಬಂದಿ ಮೊಬೈಲ್ ಬುಲೆಟ್ ಪ್ರೂಫ್ ವಾಹನದಲ್ಲಿ ಕುಳಿತಿದ್ರು. ಈ ವೇಳೆ ಉಗ್ರರು ವಾಹನದತ್ತ ಗ್ರೆನೇಡ್ ಎಸೆದಿದ್ದಾರೆ.

ಅದು ಅಹ್ಮದ್ ಲೋನ್ ಅವರ ಕಾಲ ಬಳಿ ಬಂದು ಬಿದ್ದಿತ್ತು. ಸ್ವಲ್ಪವೂ ಹಿಂಜರಿಯದೆ ಅಹ್ಮದ್ ಲೋನ್ ಅನ್ನು ಕೂಡಲೇ ತೆಗೆದು ರಸ್ತೆಗೆ ಎಸೆದ್ರು. ಇನ್ನೋರ್ವ ಅಧಿಕಾರಿ ಸಲೀಮ್ ವಾಹನದ ಬಾಗಿಲು ಬಂದ್ ಮಾಡಿದ್ರು. ಇಬ್ಬರು ಅಧಿಕಾರಿಗಳ ಕರ್ತವ್ಯ ಪ್ರಜ್ಜೆಗೆ ಹಿರಿಯ ಅಧಿಕಾರಿಗಳಿಂದ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಪದೋನ್ನತಿ ಹಾಗೂ ನಗದು ಪುರಸ್ಕಾರ ಕೂಡ ದೊರೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...