alex Certify
ಕನ್ನಡ ದುನಿಯಾ       Mobile App
       

Kannada Duniya

ಸುರಂಗ ಕೊರೆದು ಭಾರತದೊಳಗೆ ಪ್ರವೇಶಿಸಲು ಮುಂದಾದ ಪಾಕ್ ಉಗ್ರರು

page1-2-273x300

ಭಾರತದ ಗಡಿಯಲ್ಲಿ ಸದಾ ಉಪಟಳ ನೀಡುತ್ತಿರುವ ಪಾಕ್ ಪ್ರೇರಿತ ಉಗ್ರರು ಇದೀಗ ಜಮ್ಮು ಕಾಶ್ಮೀರದ ಗಡಿ ರೇಖೆಯಾಗಿರುವ ರಣ್ಬೀರ್ ಸಿಂಗ್ ಪುರದಲ್ಲಿ 30 ಅಡಿ ಉದ್ದದ ಸುರಂಗ ಮಾರ್ಗ ರಚಿಸಿರುವುದು ಪತ್ತೆಯಾಗಿದೆ.

ಹೌದು. ಇಲ್ಲಿನ ರಣ್ಬೀರ್ ಸಿಂಗ್ ಪುರದಲ್ಲಿ ಪಾಕಿಸ್ತಾನದ ಉಗ್ರಗಾಮಿಗಳು ಭಾರತದೊಳಗೆ ನುಸುಳಲು ಅನುಕೂಲವಾಗುವಂತೆ ಹಾಗೂ ಜಮ್ಮುವಿಗೆ ಶಸ್ತ್ರಾಸ್ತ್ರಗಳನ್ನು ರವಾನಿಸುವ ಸಲುವಾಗಿ ಈ ಸುರಂಗವನ್ನು ಕೊರೆದಿರುವುದನ್ನು ಭಾರತೀಯ ಗಡಿ ಭದ್ರತಾ ಪಡೆ ಪತ್ತೆ ಹಚ್ಚಿದೆ.

ವಿಶೇಷವೆಂದರೆ 2012 ರಲ್ಲಿಯೂ ಸಹ 400 ಮೀಟರ್ ಉದ್ದದ ಸುರಂಗವನ್ನು ಪಾಕ್ ಉಗ್ರರು ಸಾಂಬಾ ವಲಯದಲ್ಲಿ ನಿರ್ಮಿಸಿದ್ದರು. 2009 ರಲ್ಲಿ ಗಡಿ ರೇಖೆ ಅಕ್ನೂರ್ ನಲ್ಲೂ ಸುರಂಗವನ್ನು ಕೊರೆದಿರುವುದು ಪತ್ತೆಯಾಗಿದ್ದನ್ನಿಲ್ಲಿ ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...