alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಕರನ ಜೊತೆ ಸೇರಿ ಪತಿಗೇನು ಮಾಡಿದ್ದಾಳೆ ನೋಡಿ..!

inject

ನವದೆಹಲಿ: ಅನೈತಿಕ ಸಂಬಂಧದ ಕಾರಣಕ್ಕೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ಓದಿರುತ್ತೀರಿ.

ಆದರೆ, ಬೆಚ್ಚಿ ಬೀಳುವಂತಿದೆ ಈ ಅನೈತಿಕ ಸಂಬಂಧದ ಸ್ಟೋರಿ. ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ವ್ಯಕ್ತಿಗೆ ಆತನ ಪತ್ನಿಯೇ ಮುಳುವಾಗಿದ್ದು, ವಿಷದ ಇಂಜೆಕ್ಷನ್ ಕೊಟ್ಟು ಸಾಯಿಸಿದ್ದಾಳೆ.

ಕೊಟಕ್ ಮಹೀಂದ್ರಾ ಬ್ಯಾಂಕ್ ಮ್ಯಾನೇಜರ್ ರವಿಕುಮಾರ್(28) ಮೃತಪಟ್ಟವರು. ರವಿಕುಮಾರ್ ಅವರ ಪತ್ನಿ ಹಾಗೂ ಜಿಮ್ ತರಬೇತುದಾರ ಅನೀಶ್ ಯಾದವ್ ಹಿಂದೆ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದಾರೆ.

ಮದುವೆಯಾದ ಬಳಿಕವೂ ಇವರಿಬ್ಬರ ನಡುವೆ ಅನೈತಿಕ ಸಂಬಂಧ ಮುಂದುವರೆದಿದೆ. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ರವಿಕುಮಾರ್ ಹತ್ಯೆ ಮಾಡಲು ಫಿಸಿಯೋಥೆರಪಿಸ್ಟ್ ಡಾ. ಪ್ರೇಮ್ ಗೆ ಸುಫಾರಿ ನೀಡಿದ್ದಾರೆ.1.5 ಲಕ್ಷ ರೂ. ಕೊಟ್ಟು ರವಿಕುಮಾರ್ ಗೆ ವಿಷದ ಇಂಜೆಕ್ಷನ್ ಕೊಡುವಂತೆ ಹೇಳಿದ್ದಾರೆ.

ಅದರಂತೆ ಪ್ರೇಮ್, ಉತ್ತರ ದೆಹಲಿಯ ಸದರ್ ಬಜಾರ್ ನಲ್ಲಿ ವಿಷದ ಇಂಜೆಕ್ಷನ್ ಕೊಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ರವಿಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರವಿಕುಮಾರ್ ಪತ್ನಿ, ಆಕೆಯ ಪ್ರಿಯಕರ ಅನೀಶ್ ಯಾದವ್ ಹಾಗೂ ವೈದ್ಯ ಪ್ರೇಮ್ ಅವರನ್ನು ಬಂಧಿಸಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...