alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜ್ ನಲ್ಲೇ ವಿದ್ಯಾರ್ಥಿನಿ ವಿವಸ್ತ್ರಗೊಳಿಸಿ ಚಿತ್ರೀಕರಣ

jarkdn-dd

ರಾಂಚಿ: ಕಾಲೇಜ್ ನಲ್ಲಿ ಬುಡಕಟ್ಟು ವಿದ್ಯಾರ್ಥಿನಿಯನ್ನು ಬೆತ್ತಲೆಗೊಳಿಸಿ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಲ್ಲದೇ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.

ಡುಮ್ಕಾ ಜಿಲ್ಲೆ ಸಂತಾಲ್ ಪರಗಣ ಮಹಿಳಾ ಕಾಲೇಜ್ ನಲ್ಲಿ ಆಗಸ್ಟ್ 4 ರಂದು ಈ ಘಟನೆ ನಡೆದಿದೆ. ಮೊಬೈಲ್ ಕಳವು ಆರೋಪದ ಮೇಲೆ ಬುಡಕಟ್ಟು ವಿದ್ಯಾರ್ಥಿನಿಯನ್ನು ಥಳಿಸಲಾಗಿದೆ.

ಬಳಿಕ ಆಕೆಯನ್ನು ಬೆತ್ತಲೆಗೊಳಿಸಿ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಅಲ್ಲದೇ 18,600 ರೂ. ದಂಡ ಕಟ್ಟುವಂತೆ ಬೆದರಿಕೆ ಹಾಕಲಾಗಿದೆ.

ಬಡ ಕುಟುಂಬದ ವಿದ್ಯಾರ್ಥಿನಿ ಪ್ರಥಮ ವರ್ಷದ ಬಿ.ಎ. ಓದುತ್ತಿದ್ದು, ಹಾಸ್ಟೆಲ್ ನಲ್ಲಿದ್ದಳು. ಆಕೆಯ ತಂದೆ, ನನ್ನ ಮಗಳ ಭವಿಷ್ಯವೇನು, ಆಕೆ ಕಾಲೇಜಿಗೆ ಹೇಗೆ ಹೋಗಬೇಕೆಂದು ಅಳಲು ತೋಡಿಕೊಂಡಿದ್ದಾರೆ.

ಘಟನೆ ಬೆಳಕಿಗೆ ಬರುತ್ತಲೇ ಡುಮ್ಕಾ ಜಿಲ್ಲಾ ಪೊಲೀಸ್ ಅಧೀಕ್ಷಕ ಮಯೂರ್ ಪಟೇಲ್ ಹಾಗೂ ಅಧಿಕಾರಿಗಳ ತಂಡ ಕಾಲೇಜ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ. ಸಂತ್ರಸ್ಥೆಯಿಂದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸರ್ಕಾರದ ಮಟ್ಟದಲ್ಲಿಯೂ ಈ ಪ್ರಕರಣ ಚರ್ಚೆಯಾಗಿ ಆಡಳಿತ, ವಿರೋಧ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ ವ್ಯಕ್ತವಾಗಿದೆ. ನೊಂದ ಯುವತಿಗೆ ನ್ಯಾಯ ಕೊಡಿಸಬೇಕೆಂದು ಪ್ರತಿಭಟನೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...