alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಸ್ಟ್ ವಾಂಟೆಡ್ ಮಾವೋ ಮುಖಂಡ ಹೃದಯಾಘಾತಕ್ಕೆ ಬಲಿ

ಜಾರ್ಖಂಡ್ ನ ಮಾವೋ ಕಮಾಂಡರ್ ಡಿಯೋ ಕುಮಾರ್ ಸಿಂಗ್ ಅಲಿಯಾಸ್ ಅರವಿಂದ್ ಜಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನಿವಾಸದಲ್ಲೇ ಆತ ಮೃತಪಟ್ಟಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಆತನನ್ನು ಹಿಡಿದುಕೊಟ್ರೆ 1 ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.

ಅರವಿಂದ್ ಜಿ ಬಿಹಾರದ ಜೆಹನಾಬಾದ್ ಮೂಲದವನು. ಆತನ ಕುಟುಂಬಸ್ಥರು ಈಗಲೂ ಅಲ್ಲೇ ನೆಲೆಸಿದ್ದಾರೆ ಎನ್ನಲಾಗ್ತಿದೆ. ಬಹಳ ದಿನಗಳಿಂದ ಆತ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ, ಈಗ ಮೃತಪಟ್ಟಿದ್ದಾನೆಂಬ ಮಾಹಿತಿ ಸಿಕ್ಕಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.

ಆತನ ಅಂತ್ಯಸಂಸ್ಕಾರಕ್ಕಾಗಿ ಕುಟುಂಬಸ್ಥರು ಬಿಹಾರದಿಂದ ಜಾರ್ಖಂಡ್-ಛತ್ತೀಸ್ ಗಢ ಗಡಿಪ್ರದೇಶಕ್ಕೆ ಆಗಮಿಸಿರುವ ಬಗ್ಗೆ ಸಹ ಮಾಹಿತಿ ಸಿಕ್ಕಿದೆ. ಕೆಂಪು ಉಗ್ರರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸಹ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಅವರ ಅಡಗುದಾಣಗಳನ್ನೆಲ್ಲ ನಾಶಪಡಿಸಿದೆ. ಆದ್ರೂ ಜಾರ್ಖಂಡ್ ಹಾಗೂ ಛತ್ತೀಸ್ ಗಢದಲ್ಲಿ ಮಾವೋಗಳ ಅಟ್ಟಹಾಸ ನಿಂತಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...