alex Certify
ಕನ್ನಡ ದುನಿಯಾ       Mobile App
       

Kannada Duniya

ಜಾರ್ಖಂಡ್ ನಲ್ಲಿ ಹಸಿವಿನಿಂದ ಮತ್ತೊಂದು ಸಾವು

ಧನಬಾದ್: ಆಧಾರ್ ಕಾರ್ಡ್ ಇಲ್ಲದ ಕಾರಣ ಪಡಿತರ ಸಿಗದೇ, ಬಾಲಕಿ ಮೃತಪಟ್ಟ ಘಟನೆ ಮಾಸುವ ಮೊದಲೇ ಜಾರ್ಖಂಡ್ ನಲ್ಲಿ ಮತ್ತೊಬ್ಬರು ಹಸಿವಿನಿಂದ ಮೃತಪಟ್ಟಿದ್ದಾರೆ.

ಝಾರಿಯಾ ತಾರಾಬಗಾನ್ ನಿವಾಸಿ ರಿಕ್ಷಾ ಗಾಡಿ ಎಳೆಯುವ ಭೈಜನಾಥ್ ರವಿದಾಸ್(45) ಶುಕ್ರವಾರ ಸಾವನ್ನಪ್ಪಿದ್ದು, ಶನಿವಾರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ತಮ್ಮ ಪತಿ ಹಸಿವಿನಿಂದ ಸಾವನ್ನಪ್ಪಿರುವುದಾಗಿ ಬೈಜನಾಥ್ ಪತ್ನಿ ಪಾರ್ವತಿದೇವಿ ಹೇಳಿದ್ದಾರೆ. 2 ದಿನಗಳಿಂದ ಊಟ ಮಾಡಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರೂ, ಔಷಧ ಸೇವಿಸಿರಲಿಲ್ಲ. ಕುಟುಂಬದವರೆಲ್ಲಾ ಊಟ ಮಾಡಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಕುಟುಂಬದ ಸದಸ್ಯರು ಆಧಾರ್ ಕಾರ್ಡ್ ಹೊಂದಿದ್ದಾರೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ. ಪಡಿತರ ಇನ್ನೂ ಸಿಕ್ಕಿಲ್ಲ. ಭೈಜನಾಥ್ ಸಾವಿಗೆ ಹಸಿವು ಕಾರಣವಲ್ಲ, ಅನಾರೋಗ್ಯ ಕಾರಣ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಡಳಿತದ ಅಧಿಕಾರಿಗಳು ಕುಟುಂಬ ನಿರ್ವಹಣೆಗೆ ಆಹಾರ ಧಾನ್ಯ, ಹಾಗೂ 20,000 ರೂ. ನಗದು ನೀಡಿದ್ದಾರೆ.

ಭೈಜನಾಥ್ ಹಸಿವಿನಿಂದ ಮೃತಪಟ್ಟಿಲ್ಲ. ಅನಾರೋಗ್ಯದಿಂದ ಅವರು ಹಾಸಿಗೆ ಹಿಡಿದಿದ್ದರು. ಆ ನಂತರದಲ್ಲಿ ಅವರು ಮೃತಪಟ್ಟಿದ್ದು, ಅವರ ಸಾವಿನ ಕುರಿತಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...