alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯ ಹಣದಲ್ಲಿ ಸ್ಮಾರ್ಟ್ ಫೋನ್ ಖರೀದಿ

toilet-dd

ಧನ್ ಬಾದ್: ಜಾರ್ಖಂಡ್ ನ ಧನಬಾದ್ ನಿವಾಸಿಯೊಬ್ಬ ಶೌಚಾಲಯ ನಿರ್ಮಾಣಕ್ಕೆ ನೀಡಲಾಗಿದ್ದ ಹಣದಲ್ಲಿ ಮೊಬೈಲ್ ಫೋನ್ ಖರೀದಿಸಿದ್ದಾನೆ.

ಪತ್ನಿ ಪ್ರತಿಭಟಿಸಿದ ಬಳಿಕ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾನೆ. ರಾಜೇಶ್ ಮಹಾತೊ ಮನೆಯಲ್ಲಿ ಎಲ್ಲಾ ಇದ್ದರೂ, ಶೌಚಾಲಯ ಮಾತ್ರ ಇಲ್ಲ.

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಅಭಿಯಾನದ ಭಾಗವಾಗಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ.

ಸ್ಥಳೀಯ ಸಂಸ್ಥೆಯಿಂದ ಫಲಾನುಭವಿಗಳಿಗೆ 12,000 ರೂ. ನೀಡಲಿದ್ದು, ಮೊದಲ ಕಂತಿನಲ್ಲಿ 6000 ರೂ, 2 ನೇ ಕಂತಿನಲ್ಲಿ 6000 ರೂ. ಕೊಡಲಾಗುತ್ತದೆ.

ಧನಬಾದ್ ಭುಲಿ ಟೌನ್ ಶಿಪ್ ನಿವಾಸಿಯಾಗಿರುವ ರಾಜೇಶ್ ಮಹಾತೊನಿಗೆ ಶೌಚಾಲಯ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ 6000 ರೂ. ಬಂದಿದ್ದು, ಅದರಲ್ಲಿ ಫೋನ್ ಖರೀದಿಸಿದ್ದಾನೆ.

ಮನೆಯಲ್ಲಿ ಆತನ ಪತ್ನಿ ಆಕ್ಷೇಪಿಸಿದ್ದಾರೆ. ಶೌಚಾಲಯ ಕಟ್ಟದೇ ಫೋನ್ ಖರೀದಿಸಿದ್ದ ಗಂಡನೊಂದಿಗೆ ಜಗಳವಾಡಿ ಫೋನ್ ಕೆಳಕ್ಕೆ ಎಸೆದಿದ್ದಾಳೆ. ಅಲ್ಲದೇ ಊಟ ಬಿಟ್ಟಿದ್ದಾಳೆ. ಶೌಚಾಲಯ ಕಟ್ಟಲೇಬೇಕೆಂದು ಪಟ್ಟು ಹಿಡಿದಿದ್ದಾಳೆ.

ಪತ್ನಿಯ ಜಗಳ ಹಾಗೂ ಶೌಚಾಲಯಕ್ಕಾಗಿ ಹೊರಗೆ ಹೋಗಬೇಕಾದ ಪರಿಸ್ಥಿತಿಯನ್ನು ಅರಿತು. ರಾಜೇಶ್ ಖಾಸಗಿಯವರಿಂದ ಸಾಲ ಪಡೆದು ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾನೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜೇಶ್, ಶೌಚಾಲಯದ ಹಣದಲ್ಲಿ ಫೋನ್ ಖರೀದಿಸಿದ್ದರಿಂದ ಮನೆಯಲ್ಲಿ ಮಹಾಭಾರತವೇ ನಡೆಯಿತು. ಪತ್ನಿ 2 ದಿನ ಊಟ ಮಾಡಿರಲಿಲ್ಲ. ಶೌಚಾಲಯ ಅಗತ್ಯವೆಂಬುದನ್ನು ತಿಳಿದುಕೊಂಡೆ. ಈಗ ಖಾಸಗಿಯವರಿಂದ ಸಾಲ ಪಡೆದು ನಿರ್ಮಾಣ ಕಾಮಗಾರಿ ಆರಂಭಿಸಿದ್ದೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...