alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಶಾಲೆಯಲ್ಲೇ ಶಿಕ್ಷಕಿಯ ತಲೆ ಕಡಿದ ಯುವಕ

ಯುವಕನೊಬ್ಬ ಶಾಲೆಯಲ್ಲಿಯೇ ಶಿಕ್ಷಕಿಯ ತಲೆ ಕಡಿದು ಬಳಿಕ ಊರ ತುಂಬಾ ಅಡ್ಡಾಡಿರುವ ಭೀಭತ್ಸ ಘಟನೆ ಉತ್ತರಕಾಂಡದಲ್ಲಿ ನಡೆದಿದೆ.

50 ವರ್ಷದ ಶಿಕ್ಷಕಿ ಸುಕ್ರಾ ಹೆಸ್ಸಾ ಭೀಕರವಾಗಿ ಹತ್ಯೆಗೀಡಾದ ಶಿಕ್ಷಕಿಯಾಗಿದ್ದು, ಇವರು ಖಪರ್ಸಾಯ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆಂದು ತಿಳಿದು ಬಂದಿದೆ.

ಮಂಗಳವಾರ ಮಧ್ಯಾಹ್ನ ಶಾಲೆಗೆ ನುಗ್ಗಿದ 20 ವರ್ಷದ ಹರಿ ಹೆಂಬ್ರಾಮ್ ಎಂಬಾತ ಶಿಕ್ಷಕಿಯನ್ನು ಎಳೆದುಕೊಂಡು ಬಂದು ತನ್ನಲ್ಲಿದ್ದ ಮಾರಕಾಸ್ತ್ರದಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಬಳಿಕ ತಲೆಯನ್ನು ಕತ್ತರಿಸಿ ಅಟ್ಟಹಾಸ ಮೆರೆದಿದ್ದಾನೆ.

ಶಿಕ್ಷಕಿ ಹಾಗೂ ಹಂತಕ ಒಂದೇ ಗ್ರಾಮದವರೆಂದು ಹೇಳಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಾವ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂಬುದು ವಿಚಾರಣೆ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...