alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಭೂಪ…!

ಜೆಮ್ಷೆಡ್ ಪುರ: ಗೆಳತಿಯ ಪರೀಕ್ಷೆ ಬರೆಯಲು ಬಂದ ಯುವಕನೊಬ್ಬ, ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ ಘಟನೆ ಜಾರ್ಖಂಡ್ ನ ಜೆಮ್ಷೆಡ್ ಪುರದಲ್ಲಿ ನಡೆದಿದೆ.

ರಾಮ್ ಪುಕಾರ್ ರವಿ ಬಂಧಿತ ಯುವಕ. ಭಾರತೀಯ ರಿಸರ್ವ್ ಬೆಟಾಲಿಯನ್(IRB) ಪ್ರವೇಶ ಪರೀಕ್ಷೆ ಬರೆಯಲು ನರ್ಬೇ ಹೆರಾಮ್ ಹನ್ಸರಾಜ್ ಹೈಸ್ಕೂಲ್ ನಲ್ಲಿದ್ದ ಪರೀಕ್ಷಾ ಕೇಂದ್ರಕ್ಕೆ ರವಿ ಪರೀಕ್ಷೆ ಬರೆಯಲು ಬಂದಿದ್ದ. ಆದರೆ, ಆತನಿಗೆ ಕಂಪ್ಯೂಟರ್ ಹೇಗೆ ಬಳಸಬೇಕೆಂಬ ಕನಿಷ್ಟ ಮಾಹಿತಿಯೂ ಇರಲಿಲ್ಲ.

ರವಿಯ ಗೆಳತಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಟಾಲಿಯನ್ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕಿದ್ದಳು. ಆದರೆ, ಆಕೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರಲಿಲ್ಲ. ಪರೀಕ್ಷೆಯ ಪ್ರವೇಶ ಪತ್ರ ಕೂಡ ಬಂದಿದ್ದು, ಇದನ್ನು ನೋಡಿದ ರವಿ, ಗೆಳತಿಯ ಫೋಟೋ ತೆಗೆದು ತನ್ನ ಫೋಟೋ ಅಂಟಿಸಿದ್ದಾನೆ.

ಅದೇ ಹಾಲ್ ಟಿಕೆಟ್ ತೆಗೆದುಕೊಂಡು ಪರೀಕ್ಷೆ ಬರೆಯಲು ಬಂದಿದ್ದಾನೆ. ಪರೀಕ್ಷಾ ಮೇಲ್ವಿಚಾರಕರು ಯುವತಿಯ ಹೆಸರಿನ ಸ್ಥಳದಲ್ಲಿ ಯುವಕ ಕುಳಿತಿದ್ದನ್ನು ಗಮನಿಸಿ ಪ್ರವೇಶ ಪತ್ರವನ್ನು ನೋಡಿದ್ದಾರೆ. ರವಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ರೈಲ್ವೇ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ.

ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗೆಳತಿಗೆ ಸಹಾಯ ಮಾಡಲು ಪರೀಕ್ಷೆ ಬರೆಯಲು ಬಂದಿದ್ದಾಗಿ ಆತ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...