alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಮೊದಲ ಸಗಣಿಮುಕ್ತ ನಗರವಾಗಲಿದೆ ಜಮ್ಷೆಡ್ ಪುರ

ಜಾರ್ಖಂಡ್ ರಾಜ್ಯದ ಜಮ್ಷೆಡ್ ಪುರ ನಗರ ಶೀಘ್ರದಲ್ಲೇ ದೇಶದ ಮೊದಲ ಸಗಣಿಮುಕ್ತ ನಗರ ಎಂಬ ಖ್ಯಾತಿಗೆ ಭಾಜನವಾಗಲಿದೆ. ಇಂಥದ್ದೊಂದು ವಿಶೇಷವಾದ ಯೋಜನೆಯೊಂದನ್ನು ಈ ನಗರ ಅಳವಡಿಸಿಕೊಂಡಿದ್ದು, ಅದಕ್ಕಾಗಿ ಎರಡು ಸಂಸ್ಥೆಗಳು ಒಪ್ಪಂದವನ್ನು ಕೂಡ ಮಾಡಿಕೊಂಡಿವೆ.

ಜೆಮ್ಷೆಡ್ ಪುರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ದನಗಳು ನಿಂತು, ವಾಹನ ಸಂಚಾರಕ್ಕೆ, ಸಾರ್ವಜನಿಕರ ಓಡಾಟಕ್ಕೆ ತೊಂದರೆಯುಂಟು ಮಾಡಿದ್ದವು. ಸಾರ್ವಜನಿಕ ರಸ್ತೆಗಳು ದನಗಳ ಕೊಟ್ಟಿಗೆಗಳಾಗಿ ಮಾರ್ಪಟ್ಟಿದ್ದವು. ರಸ್ತೆಗಳ ತುಂಬೆಲ್ಲ ಸಗಣಿ ರಾಶಿ ಬೀಳುತ್ತಿದ್ದು, ಅನಾರೋಗ್ಯದ ಸಮಸ್ಯೆ ಬಿಗಡಾಯಿಸತೊಡಗಿದ್ದವು.

ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಮಾಲೀಕರ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದರು. ಈಗ ಎಚ್ಚೆತ್ತುಕೊಂಡಿರುವ ಜಾರ್ಖಂಡ್ ಸರ್ಕಾರ, ಜೆಮ್ಷೆಡ್ ಪುರವನ್ನು ಸಗಣಿಮುಕ್ತ ನಗರವನ್ನಾಗಿ ಮಾಡಲು ಹೊರಟಿದೆ.

ಈ ನೂತನ ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಎರಡು ಸಂಸ್ಥೆಗಳು ಒಪ್ಪಂದವನ್ನು ಮಾಡಿಕೊಂಡಿವೆ. ಒಪ್ಪಂದದ ಪ್ರಕಾರ ಎರಡೂ ಸಂಸ್ಥೆಗಳಿಂದ ನಗರದಲ್ಲಿ ಪ್ರತಿ ದಿನ ಸಗಣಿ ಸಂಗ್ರಹ ಹಾಗೂ ವಿಲೇವಾರಿ ನಡೆಯಲಿದೆ. ಮೊದಲು ಅಧಿಕಾರಿಗಳು ಬಂದು ಜೆಮ್ಷೆಡ್ ಪುರದಲ್ಲಿರುವ ಕೊಟ್ಟಿಗೆಗಳ ಸಂಖ್ಯೆ, ದನಗಳ ಸಂಖ್ಯೆ, ಪ್ರತಿದಿನ ಸಂಗ್ರಹವಾಗಬಹುದಾದ ಸಗಣಿ ಪ್ರಮಾಣ, ಬಳಿಕ ಅವುಗಳನ್ನು ವಿಲೇವಾರಿ ಮಾಡುವ ವಿಧಾನಗಳ ಬಗ್ಗೆ ಸಮೀಕ್ಷೆ ನಡೆಸಲಿದ್ದಾರೆ. ಆ ಬಳಿಕ ಯೋಜನೆ ಜಾರಿಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...