alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಸಾವಿಗೆ ಕಾರಣವಾಯ್ತು ಆಧಾರ್ ಕಾರ್ಡ್

ಜಾರ್ಖಂಡ್ ನಲ್ಲಿ ಆಧಾರ್ ಕಾರ್ಡ್ ಅನ್ನು ರೇಶನ್ ಕಾರ್ಡ್ ಜೊತೆ ಲಿಂಕ್ ಮಾಡದೇ ಇದ್ದಿದ್ದಕ್ಕೆ ಕುಟುಂಬವೊಂದು ಮನೆ ಮಗಳನ್ನೇ ಕಳೆದುಕೊಂಡಿದೆ. ರೇಶನ್ ಸಿಗದೇ ಇದ್ದಿದ್ರಿಂದ 11 ವರ್ಷದ ಬಾಲಕಿ ಹಸಿವು ತಾಳಲಾರದೆ ಮೃತಪಟ್ಟಿದ್ದಾಳೆ.

ಕೋಯ್ಲಿ ದೇವಿ ಎಂಬ ಮಹಿಳೆಗೆ ರೇಶನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಬೇಕು ಅನ್ನೋದು ತಿಳಿದಿರಲಿಲ್ಲ. ಕಡು ಬಡ ಕುಟುಂಬ ಅವಳದ್ದು. ಲಿಂಕ್ ಮಾಡಿಲ್ಲ ಅನ್ನೋ ಕಾರಣಕ್ಕೆ ಪಡಿತರ ಅಕ್ಕಿ ನೀಡಲು ನ್ಯಾಯಬೆಲೆ ಅಂಗಡಿಯಾತ ನಿರಾಕರಿಸಿದ್ದಾನೆ.

ಮನೆಯಲ್ಲಿ ತುತ್ತು ಕೂಳು ಕೂಡ ಇರಲಿಲ್ಲ. ಹಸಿವಿನಿಂದ ಬಳಲಿ ಬೆಂಡಾಗಿದ್ದ ಮಗು ಅನ್ನ ಅನ್ನ ಎನ್ನುತ್ತಲೇ ಪ್ರಾಣ ಬಿಟ್ಟಿದೆ. ಆಧಾರ್ ಕಾರ್ಡ್ ಇಲ್ಲದವರಿಗೂ ಪಡಿತರ ನೀಡಬೇಕೆಂದು ಸುಪ್ರೀಂ ಕೋರ್ಟ್ ನಿಯಮವೇ ಇದೆ. ಹಾಗಾಗಿ ಬಾಲಕಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಾರ್ಖಂಡ್ ಸರ್ಕಾರ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...