alex Certify
ಕನ್ನಡ ದುನಿಯಾ       Mobile App
       

Kannada Duniya

ಹಫೀಜ್ ಸೈಯ್ಯದ್ ಗೆ ಸವಾಲು ಹಾಕಿದ 15 ವರ್ಷದ ಬಾಲೆ

jhanvi-1ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಗೆ ತನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದ ಲೂಧಿಯಾನದ 15 ವರ್ಷದ ಬಾಲೆ ಜಾಹ್ನವಿ ಬೆಹೆಲ್, ಇದೀಗ ಲಷ್ಕರ್-ಇ-ತಯ್ಯೆಬಾ ಮುಖಂಡ ಹಫೀಜ್ ಸಯ್ಯದ್ ಗೆ ಸವಾಲು ಹಾಕಿದ್ದಾಳೆ.

ಮುಂಬರುವ ಆಗಸ್ಟ್ 15 ರಂದು ಶ್ರೀನಗರದ ಲಾಲ್ ಚೌಕ್ ನಲ್ಲಿ ತಾನು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದು, ಪ್ರತ್ಯೇಕವಾದಿಗಳು ಅಥವಾ ಪಾಕಿಸ್ತಾನಿಯರು ಧೈರ್ಯವಿದ್ದರೆ ಇದನ್ನು ತಡೆಯಲಿ ಎಂದು ಜಾಹ್ನವಿ ಹೇಳಿದ್ದಾಳೆ.

ಈ ಸಂಧರ್ಭದಲ್ಲಿ ಹಫೀಜ್ ಸಯ್ಯದ್ ಗೆ ಕಿವಿ ಮಾತು ಹೇಳಿರುವ ಜಾಹ್ನವಿ, ಕಾಶ್ಮೀರ ಗಲಭೆಗೆ ಪ್ರಚೋದನೆ ನೀಡುವುದನ್ನು ನಿಲ್ಲಿಸದಿದ್ದರೆ ನನ್ನಂತಹ ಕೋಟ್ಯಾಂತರ ರಾಷ್ಟ್ರ ಪ್ರೇಮಿಗಳು ನಿಮಗೆದುರಾಗಲಿದ್ದಾರೆ ಎಂದಿದ್ದಾಳೆ. ಲಾಲ್ ಚೌಕ್ ನಲ್ಲಿ ಭಾರತದ ರಾಷ್ಟ್ರ ಧ್ವಜಕ್ಕೆ ಕೆಲವರು ಅವಮಾನ ಮಾಡಿದ್ದ ಕಾರಣ ತಾನು ಅಲ್ಲಿಯೇ ಧ್ವಜಾರೋಹಣ ಮಾಡುವುದಾಗಿ ಜಾಹ್ನವಿ ತಿಳಿಸಿದ್ದಾಳೆ.

ಲೂಧಿಯಾನದ ಭಾಯಿ ರಣಧೀರ್ ಸಿಂಗ್ ನಗರದಲ್ಲಿರುವ ಡಿ.ಎ.ವಿ. ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಜಾಹ್ನವಿ, ರಕ್ಷಾ ಜ್ಯೋತಿ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿ ಸಕ್ರಿಯವಾಗಿದ್ದಾಳೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ, ಸ್ವಚ್ಚತಾ ಆಂದೋಲನದಲ್ಲಿ ಸಕ್ರಿಯವಾಗುವ ಮೂಲಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನಳಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...