alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಕ್ಕಿ ಬೀಳುವ ಭಯದಲ್ಲಿ ಕದ್ದ ಆಭರಣ ನುಂಗಿದ್ಲು ಮಹಿಳೆ…!

ಖರೀದಿ ನೆಪದಲ್ಲಿ ಚಿನ್ನಾಭರಣದ ಅಂಗಡಿಗೆ ಬಂದಿದ್ದ ಮಹಿಳೆಯೊಬ್ಬಳು, ಕೆಲಸಗಾರರ ಕಣ್ಣಿಗೆ ಮಣ್ಣೆರಚಿ ಕಿವಿಯೋಲೆ ಕದ್ದಿದ್ದು, ಈ ಕಳವು ಅಂಗಡಿಯವರ ಗಮನಕ್ಕೆ ಬಂದ ವೇಳೆ ತಪಾಸಣೆಗೆ ಮುಂದಾದಾಗ ಸಿಕ್ಕಿ ಬೀಳುವ ಭಯದಲ್ಲಿ ಆಭರಣವನ್ನೇ ನುಂಗಿದ ಘಟನೆ ನಡೆದಿದೆ.

ಉತ್ತರಪ್ರದೇಶದ ಗೋರಖ್ಪುರದಲ್ಲಿ ಈ ಘಟನೆ ನಡೆದಿದ್ದು, ಕಿವಿಯೋಲೆ ಕದ್ದ ಮಹಿಳೆ ಅದನ್ನು ತನ್ನ ಕಿಸೆಗೆ ಹಾಕಿಕೊಂಡಿದ್ದಾಳೆ. ಕೆಲ ಹೊತ್ತಿನ ಬಳಿಕ ಅಂಗಡಿಯವರಿಗೆ ಆಭರಣ ಮಿಸ್ ಆಗಿರುವ ವಿಚಾರ ಗಮನಕ್ಕೆ ಬಂದಿದ್ದು, ಆಗ ಅಂಗಡಿಯಲ್ಲಿದ್ದ ಗ್ರಾಹಕರ ತಪಾಸಣೆ ನಡೆಸಲು ಮುಂದಾಗಿದ್ದಾರೆ.

ತಪಾಸಣೆ ನಡೆಸಿದರೆ ತಾನು ಎಲ್ಲಿ ಸಿಕ್ಕಿ ಬೀಳುತ್ತೇನೋ ಎಂಬ ಭಯದಲ್ಲಿ ಮಹಿಳೆ ಕಿವಿಯೋಲೆಗಳನ್ನು ನುಂಗಿದ್ದಾಳೆ. ಆದರೆ ಕೆಲ ಗ್ರಾಹಕರು ಇದನ್ನು ಗಮನಿಸಿದ್ದು, ಅಂಗಡಿ ಮಾಲೀಕನ ಗಮನಕ್ಕೆ ತಂದಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಹೊಟ್ಟೆಯ ಎಕ್ಸ್-ರೇ ಮಾಡಿಸಿದಾಗ ಕಿವಿಯೋಲೆ ಇರುವುದು ಕಂಡುಬಂದಿದೆ. ಆರೋಪಿ ಮಹಿಳೆಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿ ಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...