alex Certify
ಕನ್ನಡ ದುನಿಯಾ       Mobile App
       

Kannada Duniya

ಪಕೋಡಾ ಖರೀದಿಸಲೂ ಬೇಕು ಪಾನ್ ಕಾರ್ಡ್ !!

pakoraಏಪ್ರಿಲ್ 1 ಈಗಾಗಲೇ ಮುಗಿದಿದೆ. ಹಾಗಾಗಿ ಏಪ್ರಿಲ್ ಫೂಲ್ ಮಾಡಲು ಈ ಸುದ್ದಿ ಪ್ರಕಟಿಸಿಲ್ಲ. ಇಲ್ಲಿ ನೀವು 10 ರೂಪಾಯಿಯ ಪಕೋಡಾ ಖರೀದಿಸಬೇಕೆಂದರೆ ಪಾನ್ ಕಾರ್ಡ್ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಪಾನ್ ಕಾರ್ಡ್ ನೀಡದಿದ್ದರೆ ನೀವು ಪಕೋಡಾ ಖರೀದಿಯಿಂದ ವಂಚಿತರಾಗುತ್ತೀರಿ.

ಹೌದು. ಇಂತದೊಂದು ವಿನೂತನ ಪ್ರತಿಭಟನೆಯನ್ನು ಗುಜರಾತ್ ನ ಸೂರತ್ ನಲ್ಲಿರುವ ಬರ್ದೌಲಿಯಲ್ಲಿ ಮಾಡಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, 2 ಲಕ್ಷ ರೂ. ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಆಭರಣ ಮಾರಾಟಗಾರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಈ ಅಣಕು ಕಾರ್ಯ ಮಾಡಲಾಗುತ್ತಿದೆ.

10 ರೂ. ಮೇಲ್ಪಟ್ಟ ಪಕೋಡಾವನ್ನು ಖರೀದಿಸಬೇಕಿದ್ದರೆ ಪಾನ್ ಕಾರ್ಡ್ ಕೇಳಲಾಗುತ್ತಿದೆ. ಪಾನ್ ಕಾರ್ಡ್ ತೋರಿಸಿದರೆ ಮಾತ್ರ ಅಂತವರಿಗೆ ಪಕೋಡಾ ನೀಡಲಾಗುತ್ತಿದೆ. ಆಭರಣ ಮಾರಾಟಗಾರರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಇದಕ್ಕೆ ಕೇಂದ್ರ ಸರ್ಕಾರ ಮಣಿಯದ ಕಾರಣ ಈ ಕಾರ್ಯದ ಮೂಲಕ ಸರ್ಕಾರದ ನಡೆಗೆ ಅಣಕ ಮಾಡಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...