alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರ ಇಟ್ಟ ಭೂಪ

ಮುಂಬೈ-ದೆಹಲಿ ನಡುವಣ ಜೆಟ್ ಏರ್ವೇಸ್ ವಿಮಾನದ ಟಾಯ್ಲೆಟ್ ನಲ್ಲಿ ಬಾಂಬ್ ಇದೆ ಅಂತಾ ನೋಟ್ ಬರೆದಿಟ್ಟಿದ್ದ ಆಭರಣ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಿಜು ಕಿಶೋರ್ ಸಲ್ಲಾ ಬಂಧಿತ ಆರೋಪಿ. ವಿಮಾನ ಹೈಜಾಕ್ ಆಗಲಿದೆ ಅಂತಾನೂ ಆತ ಪತ್ರದಲ್ಲಿ ಬರೆದಿದ್ದ.

ಸಾಮಾನ್ಯವಾಗಿ ಬ್ರಿಜು ಜೆಟ್ ಏರ್ವೇಸ್ ನ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮಾಡ್ತಾನೆ. ಈ ಹಿಂದೆ ತಾನೇ ಜಿರಳೆಯೊಂದನ್ನು ಹಿಡಿದು ತಂದಿದ್ದ ಬ್ರಿಜು, ಅದನ್ನು ವಿಮಾನದೊಳಕ್ಕೆ ಬಿಟ್ಟಿದ್ದ. ನಂತರ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಆಗಲೇ ಈತನ ಅಸಲಿಯತ್ತು ಕೂಡ ಬಯಲಾಗಿತ್ತು.

ಮತ್ತೊಮ್ಮೆ ಇಂತಹ ಕೃತ್ಯ ನಡೆಸುವುದಿಲ್ಲವೆಂದು ಆತ ಅಭಯ ನೀಡಿದ ಮೇಲೆ ಜೆಟ್ ಏರ್ವೇಸ್ ನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಾಗಿತ್ತು. ಈ ಬಾರಿ ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರ ಇಟ್ಟು ಬಂದಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ.

ಈ ವಿಮಾನ ಬೆಳಗಿನ ಜಾವ 2.55ಕ್ಕೆ ಮುಂಬೈನಿಂದ ಹೊರಟಿತ್ತು. ವಿಮಾನದಲ್ಲಿ 115 ಪ್ರಯಾಣಿಕರಿದ್ರು. ಶೌಚಾಲಯದಲ್ಲಿ ಬೆದರಿಕೆ ಪತ್ರ ಸಿಕ್ಕ ಬಳಿಕ ಕೂಡಲೇ ವಿಮಾನವನ್ನು ಅಹಮದಾಬಾದ್ ಗೆ ಡೈವರ್ಟ್ ಮಾಡಲಾಯ್ತು. ಪ್ರಯಾಣಿಕರನ್ನೆಲ್ಲ ಕೆಳಗಿಳಿಸಿ ಪರಿಶೀಲನೆ ನಡೆಸಲಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...