alex Certify
ಕನ್ನಡ ದುನಿಯಾ       Mobile App
       

Kannada Duniya

3 ತಾಸಿನಲ್ಲಿ ಮಾರಾಟವಾಗಿತ್ತು 100 ಕೋಟಿ ಚಿನ್ನ..!

A woman wears a gold bangle at a jewellery shop in Siliguri October 1, 2008. REUTERS/Rupak De Chowdhuri/Files

ನಕಲಿ ದಾಖಲೆಗಳ ಮೂಲಕ ಕಪ್ಪುಹಣವನ್ನು ಚಿನ್ನವನ್ನಾಗಿ ಪರಿವರ್ತಿಸಿದ್ದ ಮುಸಾದ್ದಿಯಲ್ಸ್ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಎಂಡಿ ಕೈಲಾಶ್ ಚಂದ್ ಗುಪ್ತಾ ಹೈದ್ರಾಬಾದ್ ನ ಸೆಂಟ್ರಲ್ ಕ್ರೈಮ್ ಸ್ಟೇಶನ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಆರೋಪಿಗೆ ಆಶ್ರಯ ನೀಡಿದ್ದ ಸಾಗರ್ ಪೆಟ್ರೋಲಿಯಂ ಎಂಡಿ ನರೇಂದರ್ ಕುಮಾರ್ ನನ್ನು ಕೂಡ ಬಂಧಿಸಲಾಗಿದೆ. ನವೆಂಬರ್ 8 ರಂದು ಪ್ರಧಾನಿ ಮೋದಿ, ನೋಟು ನಿಷೇಧದ ಘೋಷಣೆ ಮಾಡಿದ ಬಳಿಕ ಕೇವಲ 3 ಗಂಟೆಗಳಲ್ಲಿ 100 ಕೋಟಿ ಮೌಲ್ಯದ ಚಿನ್ನ ಮಾರಾಟವಾಗಿರುವುದಾಗಿ ಕೈಲಾಶ್ ನಕಲಿ ದಾಖಲೆ ತಯಾರಿಸಿದ್ದ. ಕಾಲ್ಪನಿಕ ಗ್ರಾಹಕರನ್ನು ಸೃಷ್ಟಿಸಿದ್ದ. ಅವರ ಸಹಿಯನ್ನು ಫೋರ್ಜರಿ ಮಾಡಿ ರಸೀದಿ ತಯಾರಿಸಿದ್ದ.

ಕೆಲ ಗ್ರಾಹಕರನ್ನು ಸಂಪರ್ಕಿಸಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಯಾರೊಬ್ಬರೂ ಚಿನ್ನ ಖರೀದಿಸಿಲ್ಲ ಅನ್ನೋದು ಬೆಳಕಿಗೆ ಬಂದಿತ್ತು. ಯಾಕಂದ್ರೆ ಕೈಲಾಶ್ ಚಂದ್ ರಸೀದಿಯಲ್ಲಿ ನಮೂದಿಸಿದ್ದ ಬಹುತೇಕ ಎಲ್ಲ ಗ್ರಾಹಕರು ಬಡವರು. 5,200 ಗ್ರಾಹಕರ ನಕಲಿ ಬಿಲ್ ತಯಾರಿಸಿದ್ದ ಕೈಲಾಶ್ ಪ್ರತಿಯೊಬ್ಬರೂ 1.89 ಲಕ್ಷ ರೂಪಾಯಿಯ ಚಿನ್ನಾಭರಣ ಕೊಂಡುಕೊಂಡಿರುವುದಾಗಿ ದಾಖಲೆ ಸೃಷ್ಟಿಸಿದ್ದ.

ಕೈಲಾಶ್ ಚಂದ್ ಎರಡು ಅಂಗಡಿಗಳನ್ನು ನಡೆಸುತ್ತಿದ್ದು, ನೋಟು ನಿಷೇಧದ ಬಳಿಕ 100 ಕೋಟಿ ರೂಪಾಯಿ ಡೆಪಾಸಿಟ್ ಮಾಡಿದ್ದ. ಪೊಲೀಸರ ಕಣ್ತಪ್ಪಿಸಲು ಕೈಲಾಶ್ ಚಂದ್ ನ ಭಾವ ನರೇಂದರ್ ಕುಮಾರ್ ಆತನನ್ನು ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ. ತಮ್ಮನ್ನು ಅರೆಸ್ಟ್ ಮಾಡದಂತೆ ಕೋರ್ಟ್ ನಿಂದ ಜಾಮೀನು ಪಡೆದಿರೋದಾಗಿ ಇಬ್ಬರೂ ಹೇಳಿಕೊಳ್ತಿದ್ದಾರೆ. ಆದ್ರೆ ಅಂತಹ ಯಾವುದೇ ಆದೇಶವಿಲ್ಲ ಅಂತಾ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...