alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಪರ್ಕ ಕಳೆದುಕೊಂಡು ಆತಂಕ ಹುಟ್ಟಿಸಿತ್ತು ಜೆಟ್ ಏರ್ವೇಸ್ ವಿಮಾನ

jet

ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡು ಆತಂಕ ಹುಟ್ಟಿಸಿದ ಜೆಟ್ ಏರ್ವೇಸ್ ವಿಮಾನವನ್ನು ಜರ್ಮನಿಯಲ್ಲಿ ರಕ್ಷಣೆ ಮಾಡಲಾಗಿದೆ. ಮೂರು ದಿನಗಳ ಹಿಂದೆ ನಡೆದ ಘಟನೆ ಇದು. ಜೆಟ್ ಏರ್ವೇಸ್ ನ 9W-118 ವಿಮಾನ ಮುಂಬೈನಿಂದ ಲಂಡನ್ ಗೆ ಹೊರಟಿತ್ತು. ವಿಮಾನದಲ್ಲಿ 330 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಇದ್ರು.

ಜರ್ಮನಿಯ ಆಗಸದಲ್ಲಿ ಹಾರುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಏರ್ ಟ್ರಾಫಿಕ್ ಕಂಟ್ರೋಲ್ ಜೊತೆ ಸಂಪರ್ಕ ಕಳೆದುಕೊಂಡಿತ್ತು. ಬೋಯಿಂಗ್ – 777 ವಿಮಾನದ ಪೈಲಟ್ ಗಳು ಸಂಪರ್ಕಕ್ಕೆ ಸಿಗ್ತಾ ಇರಲಿಲ್ಲ. ವಿಮಾನ ಹೈಜಾಕ್ ಆಗಿರಬಹುದೇನೋ ಎಂಬ ಆತಂಕ ಮನೆಮಾಡಿತ್ತು.

ಕೆಲವು ನಿಮಿಷಗಳ ನಂತರ ಪೈಲಟ್ ಗಳು ಸಂಪರ್ಕಕ್ಕೆ ಸಿಕ್ಕಿದ್ರು, ವಿಮಾನ ಸುರಕ್ಷಿತವಾಗಿ ಭೂಸ್ಪರ್ಷ ಮಾಡಿತ್ತು. ಜರ್ಮನ್ ವಾಯು ಸೇನೆ ತನ್ನ ಫೈಟರ್ ಜೆಟ್ ಗಳನ್ನು ಕಳುಹಿಸಿ ವಿಮಾನ ಮತ್ತು ಪ್ರಯಾಣಿಕರ ಸುರಕ್ಷತೆ ಬಗ್ಗೆ ಪರಿಶೀಲಿಸಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...