alex Certify
ಕನ್ನಡ ದುನಿಯಾ       Mobile App
       

Kannada Duniya

ಜೆಟ್ ಏರ್ವೇಸ್ ವಿಮಾನ ಸಿಬ್ಬಂದಿ ಯಡವಟ್ಟಿನಿಂದ ಪ್ರಯಾಣಿಕರ ಪರದಾಟ

ಮುಂಬೈನಿಂದ ಜೈಪುರಕ್ಕೆ ಹೋಗ್ತಿದ್ದ ಜೆಟ್ ಏರ್ವೇಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ವಿಮಾನ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ತುರ್ತು ಭೂಸ್ಪರ್ಶ ಅನಿವಾರ್ಯವಾಯ್ತು. ಘಟನೆಯಲ್ಲಿ ಕೆಲ ಪ್ರಯಾಣಿಕರು ಗಾಯಗೊಂಡಿದ್ದು, ಅವ್ರಿಗೆ ಚಿಕಿತ್ಸೆ ನಡೆದಿದೆ.

ಗುರುವಾರ ಬೆಳಿಗ್ಗೆ 5.30ಕ್ಕೆ ಜೆಟ್ ಏರ್ವೇಸ್ ವಿಮಾನ ಮುಂಬೈನಿಂದ ಜೈಪುರಕ್ಕೆ ಪ್ರಯಾಣ ಶುರು ಮಾಡಿದೆ. 9W-697 ವಿಮಾನ ಟೇಕ್ ಆಫ್ ಆಗಿ ಕೆಲ ಸಮಯದಲ್ಲಿಯೇ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದಿದೆ. ಇದಕ್ಕೆ ಸಿಬ್ಬಂದಿ ಕ್ಯಾಬಿನ್ ಪ್ರೆಶರ್ ನ ಸಮತೋಲನ ಕಾಯುವ ಸ್ವಿಚ್ ಒತ್ತದಿರುವುದು ಕಾರಣ. ಸಿಬ್ಬಂದಿ ನಿರ್ಲಕ್ಷ್ಯದಿಂದ ವಿಮಾನದಲ್ಲಿ ಸಮಸ್ಯೆ ಎದುರಾಯ್ತು. 166 ಪ್ರಯಾಣಿಕರ ಪೈಕಿ 30ಕ್ಕೂ ಹೆಚ್ಚು ಯಾತ್ರಿಗಳ ಮೂಗಿನಿಂದ ರಕ್ತ ಬಂತು. ಕೆಲವರಿಗೆ ತಲೆ ನೋವು, ತಲೆ ಸುತ್ತಿದ ಅನುಭವವಾಯ್ತು. ಪ್ರಯಾಣಿಕರ ದೂರಿನ ಮೇರೆಗೆ ವಿಮಾನವನ್ನು ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯ್ತು.

ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಪ್ರಕರಣದ ವಿಚಾರಣೆ ನಡೆಸುವುದಾಗಿ ಜೆಟ್ ಏರ್ವೇಸ್ ಹೇಳಿದೆ. ನಿರ್ಲಕ್ಷ್ಯ ತೋರಿರುವ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...