alex Certify
ಕನ್ನಡ ದುನಿಯಾ       Mobile App
       

Kannada Duniya

ಟೈಟ್ ಬಟ್ಟೆ ಧರಿಸಿದ ಯುವತಿಯರಿಗೆ..!

jeans

ಲಖ್ನೋ: ಆಧುನಿಕ ಜಗತ್ತಿನಲ್ಲಿ ಫ್ಯಾಷನ್ ಗೆ ಹೆಚ್ಚು ಪ್ರಾಮುಖ್ಯತೆ ಇದೆ. ಇತ್ತೀಚೆಗೆ ನಾನಾ ರೀತಿಯ ಉಡುಗೆ ತೊಡುಗೆಗಳು ಮಾರುಕಟ್ಟೆಗೆ ಬರುತ್ತಿವೆ. ಹೊಸ ವಿನ್ಯಾಸ, ಶೈಲಿಯ ಬಟ್ಟೆಗಳು ಈಗಿನ ಟ್ರೆಂಡ್ ಆಗಿದ್ದು, ಯುವಜನತೆ ಫ್ಯಾಷನ್ ವರ್ಲ್ಡ್ ನತ್ತ ಹೆಚ್ಚು ಆಕರ್ಷಿತರಾಗಿದ್ದಾರೆ.

ಜೀನ್ಸ್ ಸೇರಿದಂತೆ ಹಲವು ಬಗೆಯ ಬಟ್ಟೆಗಳನ್ನು ಯುವತಿಯರು ಧರಿಸುವುದು ಕಾಮನ್ ಆಗಿದೆ. ಆದರೆ, ಜೀನ್ಸ್ ಹಾಗೂ ಟೈಟ್ ಬಟ್ಟೆ ಧರಿಸಿದ ಯುವತಿಯರನ್ನು, ಕುಟುಂಬದಿಂದ ಬಹಿಷ್ಕರಿಸುವ ಬಗ್ಗೆ, ಉತ್ತರ ಪ್ರದೇಶದ ಬಾವ್ಲಿ ಗ್ರಾಮಪಂಚಾಯಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೆಣ್ಣುಮಕ್ಕಳು, ಯಾವ ಕಾರಣಕ್ಕೂ ಜೀನ್ಸ್ ಪ್ಯಾಂಟ್, ಟೈಟ್ ಬಟ್ಟೆ ಧರಿಸಬಾರದೆಂದು, ನಿರ್ಣಯ ಕೈಗೊಂಡಿದ್ದು, ಉಲ್ಲಂಘನೆ ಮಾಡಿದವರಿಗೆ ಬಹಿಷ್ಕಾರದ ಶಿಕ್ಷೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಮತ್ತೊಂದು ಪ್ರಮುಖ ನಿರ್ಣಯವನ್ನು ಗ್ರಾಮಪಂಚಾಯಿತಿ ಕೈಗೊಂಡಿದೆ. ಗ್ರಾಮದಲ್ಲಿ ಯಾರೂ ವರದಕ್ಷಿಣೆ ಪಡೆಯಬಾರದು. ಮದುವೆ ಮನೆಗಳಲ್ಲಿ ಡಿಜೆ ಸೌಂಡ್ ಮ್ಯೂಸಿಕ್ ಹಾಕಬಾರದೆಂದು ತೀರ್ಮಾನ ಕೈಗೊಂಡಿರುವುದಾಗಿ ಗ್ರಾಮದ ಮುಖಂಡ ಓಂವೀರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...