alex Certify
ಕನ್ನಡ ದುನಿಯಾ       Mobile App
       

Kannada Duniya

ಜೀನ್ಸ್ ಧರಿಸಿ ಬಂದಿದ್ದ ಪತ್ರಕರ್ತನಿಗೆ ಕೋರ್ಟ್ ತರಾಟೆ

bombay-high-court_650x450_61429021549

ಮುಂಬೈನಲ್ಲಿ ನಡೆದ ವೈದ್ಯರ ಸಾಮೂಹಿಕ ಮುಷ್ಕರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಂಬೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ರಾಷ್ಟ್ರೀಯ ಪತ್ರಿಕೆಯೊಂದರ ವರದಿಗಾರ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿ ಬಂದಿದ್ದ. ಆತನನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಇಂತಹ ಬಟ್ಟೆ ಧರಿಸಿ ಕೋರ್ಟ್ ವಿಷಯವನ್ನು ವರದಿ ಮಾಡುವುದು ಸೂಕ್ತವಲ್ಲ. ಇದು ಬಾಂಬೆ ಸಂಸ್ಕೃತಿಯಾ ಅಂತಾ ಪತ್ರಕರ್ತನನ್ನು ಪ್ರಶ್ನಿಸಿದೆ.

ಪತ್ರಕರ್ತರಾದ ನೀವು ಜೀನ್ಸ್, ಟಿ ಶರ್ಟ್ ಧರಿಸಿ ಅದ್ಹೇಗೆ ಕೋರ್ಟ್ ಗೆ ಬರ್ತೀರಾ ಅಂತಾ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಹಾಗೂ ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಪ್ರಶ್ನಿಸಿದ್ರು. ಆಗ ಮುಂಬೈ ಪಾಲಿಕೆಯ ವಕೀಲ ಎಸ್.ಎಸ್. ಪಾಕಲೆ ಮಧ್ಯಪ್ರವೇಶಿಸಿ, ಪತ್ರಕರ್ತರಿಗೆ ಕೋರ್ಟ್ ಗೆ ಬರಲು ಡ್ರೆಸ್ ಕೋಡ್ ಇದೆಯಾ ಅಂತಾ ಸವಾಲು ಹಾಕಿದ್ರು.

ಡ್ರೆಸ್ ಕೋಡ್ ಇಲ್ಲ ಆದ್ರೆ ಜೀನ್ಸ್ , ಟಿ-ಶರ್ಟ್ ಧರಿಸಿ ಕೋರ್ಟ್ ಗೆ ಬರುವುದು ಒಬ್ಬ ಪತ್ರಕರ್ತನಿಗೆ ಶೋಭಿಸುವುದಿಲ್ಲ ಅಂತಾ ಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ರೆ ಪತ್ರಕರ್ತರ ಧಿರಿಸು ಯಾವ ರೀತಿ ಇರಬೇಕು ಎಂಬ ಬಗ್ಗೆ ಯಾವುದೇ ನಿರ್ದೇಶನ ನೀಡಿಲ್ಲ. ಪತ್ರಕರ್ತನೊಬ್ಬನ ಬಟ್ಟೆಯ ಬಗ್ಗೆ ಕೋರ್ಟ್ ಆಕ್ಷೇಪ ಎತ್ತಿರೋದು ಇದೇ ಮೊದಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...