alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಧನದ ಭೀತಿಯಲ್ಲಿ ಜೆಡಿಯು ಶಾಸಕಿ

rockeyತನ್ನ ಕಾರನ್ನು ಓವರ್ ಟೇಕ್ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಯು ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿಯವರ ಪುತ್ರ ರಾಕಿ ಯಾದವ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಈ ಮಧ್ಯೆ ರಾಕಿ ಯಾದವ್ ನನ್ನು ಬಂಧಿಸಲೆಂದು ಮನೋರಮಾ ದೇವಿಯವರ ನಿವಾಸವನ್ನು ಪೊಲೀಸರು ಶೋಧಿಸಿದ ವೇಳೆ ಆಪಾರ ಪ್ರಮಾಣದ ಮದ್ಯದ ಬಾಟಲುಗಳು ಪತ್ತೆಯಾಗಿರುವುದು ಅವರನ್ನು ಸಂಕಷ್ಟಕ್ಕೀಡು ಮಾಡಿದೆ.

ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದ್ದು, ಅಕ್ರಮವಾಗಿ ಮದ್ಯ ಹೊಂದಿದವರಿಗೆ 10 ವರ್ಷಗಳವರೆಗೆ ಜೈಲು ಹಾಗೂ 10 ಲಕ್ಷ ರೂ. ದಂಡ ವಿಧಿಸುವ ಕಾನೂನನ್ನು ಜಾರಿಗೆ ತರಲಾಗಿದ್ದು, ಜನ ಪ್ರತಿನಿಧಿಯೊಬ್ಬರ ಮನೆಯಲ್ಲೇ ಭಾರೀ ಪ್ರಮಾಣದ ಮದ್ಯದ ಬಾಟಲು ದೊರೆತಿರುವುದರಿಂದ ಸರ್ಕಾರ, ಕಠಿಣ ಕ್ರಮಕ್ಕೆ ಮುಂದಾಗಿದೆ. ಜೆಡಿಯು ಈಗಾಗಲೇ ಮನೋರಮಾ ದೇವಿಯವರನ್ನು ಪಕ್ಷದಿಂದ ಅಮಾನತು ಮಾಡಿದ್ದು, ಈಗ ಪೊಲೀಸರು ಅವರ ವಿರುದ್ದ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯಿದೆ. ಮನೋರಮಾ ದೇವಿಯವರ ಪತಿ ಬಿಂದಿ ಯಾದವ್ ಈಗಾಗಲೇ ಜೈಲಿನಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...