alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ, ಯುವತಿಯೊಂದಿಗೆ ತೇಜಸ್ವಿ: ಫೋಟೋ ವೈರಲ್

ಪಾಟ್ನಾ: ಆರ್.ಜೆ.ಡಿ. ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಆಡಳಿತಾರೂಢ ಜೆ.ಡಿ.ಯು ನಡುವೆ ಮದ್ಯಸೇವನೆ ಕುರಿತಾದ ಆರೋಪ, ಪ್ರತ್ಯಾರೋಪ ಕೇಳಿ ಬಂದಿವೆ.

ಜೆ.ಡಿ.ಯು. ವಕ್ತಾರರು ತಮ್ಮ ಮನೆಯಲ್ಲಿ ಮದ್ಯವನ್ನು ದಾಸ್ತಾನು ಮಾಡಿದ್ದಾರೆ. ಜೆ.ಡಿ.ಯು. ಮುಖಂಡರೊಂದಿಗೆ ಮುಖ್ಯಮಂತ್ರಿ ಮದ್ಯ ಸೇವಿಸಿದ್ದಾರೆ ಎಂದು ಲಾಲೂ ಪ್ರಸಾದ್ ಹೇಳಿರುವುದಕ್ಕೆ ಜೆ.ಡಿ.ಯು. ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಲಾಲೂ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜೆ.ಡಿ.ಯು. ನಾಯಕರಾದ ಸಂಜಯ್ ಸಿಂಗ್, ನೀರಜ್ ಕುಮಾರ್ ಹಾಗೂ ನಿಖಿಲ್ ಮಂಡಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಾಲೂ ಅವರ ಪುತ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಬಿಹಾರದಲ್ಲಿ ಮದ್ಯ ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾತ್ರವಲ್ಲ, ಅಪರಿಚಿತ ಯುವತಿಯನ್ನು ತಬ್ಬಿಕೊಂಡು ಕೈಯಲ್ಲಿ ಮದ್ಯ ಹಿಡಿದುಕೊಂಡಿರುವ ತೇಜಸ್ವಿಯಾದವ್ ಅವರ ಹಳೆಯ ಫೋಟೋ ಬಿಡುಗಡೆ ಮಾಡಿದ್ದಾರೆ.

ನಾವು ನಮ್ಮ ಮನೆಗಳನ್ನು ತಪಾಸಣೆ ಮಾಡಲು ಲಾಲೂ ಅವರಿಗೆ ಅವಕಾಶ ನೀಡುತ್ತೇವೆ. ಅವರ ಮನೆಯನ್ನು ತಪಾಸಣೆ ಮಾಡಲು ನಮಗೆ ಅವಕಾಶ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ದೆಹಲಿಗೆ ಹೋದ ಸಂದರ್ಭದಲ್ಲಿ ತೇಜಸ್ವಿ ಯಾದವ್ ಬಿಹಾರ ಭವನದಲ್ಲಿ ಉಳಿಯದೇ ಮದ್ಯ ಸೇವನೆ ಮೊದಲಾದ ಕಾರಣಗಳಿಂದ ಖಾಸಗಿ ವಸತಿಗೃಹಗಳಲ್ಲಿ ಉಳಿಯುತ್ತಾರೆ. ಬಿಹಾರ ವಿಧಾನಸಭೆಯಲ್ಲಿ ಪ್ರೋಟೋಕಾಲ್ ಆಧರಿಸಿ ವಿವಿಧ ಸೌಲಭ್ಯಗಳನ್ನು ಪಡೆಯುವ ತೇಜಸ್ವಿ ದೆಹಲಿಯಲ್ಲಿ ಸೌಲಭ್ಯ ಪಡೆಯದೇ ಖಾಸಗಿ ವಸತಿ ಗೃಹಗಳಲ್ಲಿ ಉಳಿಯುವ ಗುಟ್ಟೇನು ಎಂದು ಪ್ರಶ್ನಿಸಿದ್ದಾರೆ.

ತೇಜಸ್ವಿಯವರ ರಕ್ತದ ಪರೀಕ್ಷೆ ನಡೆಸಿದಲ್ಲಿ ಯಾರು ಮದ್ಯ ಸೇವನೆ ಮಾಡಿದ್ದಾರೆ ಎಂಬುದು ಲಾಲೂ ಅವರಿಗೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಯುವತಿಯೊಂದಿಗೆ ಇರುವ ತಮ್ಮ ಫೋಟೋ ಬಿಡುಗಡೆ ಮಾಡಿದ ಜೆ.ಡಿ.ಯು. ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ತೇಜಸ್ವಿಯಾದವ್ ಇದು 2010 ರಲ್ಲಿ ಐ.ಪಿ.ಎಲ್. ಪಂದ್ಯವೊಂದರ ನಂತರದಲ್ಲಿ ತೆಗೆದ ಚಿತ್ರವಾಗಿದೆ. ಬಿ.ಜೆ.ಪಿ. ಫೋಟೋ ದುರ್ಬಳಕೆ ಮಾಡಿಕೊಂಡು 2012 ರಿಂದ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಬಳಸಿದೆ. ಅಷ್ಟು ಹೊರತಾಗಿ ಫೋಟೋ ಕುರಿತು ನನಗೆ ಗೊತ್ತಿಲ್ಲ ಎಂದು ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...