alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್..! ಚಿಕಿತ್ಸೆಗೂ ಮೊದಲೇ ಜಯಲಲಿತಾ ಸಾವು

jaya-docc

ಚೆನ್ನೈ: ಸುಮಾರು 70 ದಿನಗಳ ಕಾಲ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ಚೇತರಿಸಿಕೊಳ್ಳದೇ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಮೃತಪಟ್ಟಿದ್ದರು.

ಜಯಲಲಿತಾ ಸಾವಿನ ಬಗ್ಗೆ ಅನುಮಾನಗಳಿದ್ದು, ಕೋರ್ಟ್ ವರೆಗೂ ಅರ್ಜಿ ಸಲ್ಲಿಕೆಯಾಗಿತ್ತು. ಹಲವಾರು ನಾಯಕರು, ಸೆಲೆಬ್ರಿಟಿಗಳು ಜಯಾ ಸಾವಿನ ತನಿಖೆಗೆ ಒತ್ತಾಯಿಸಿದ್ದರು.

ಜಯಾ ನಿಧನರಾದ ತಿಂಗಳುಗಳ ನಂತರ ಅಪೊಲೊ ಆಸ್ಪತ್ರೆ ವೈದ್ಯರು ಹಾಗೂ ಅವರಿಗೆ ಚಿಕಿತ್ಸೆ ನೀಡಿದ್ದ ಲಂಡನ್ ವೈದ್ಯ ರಿಚರ್ಡ್ ಪತ್ರಿಕಾಗೋಷ್ಠಿ ನಡೆಸಿ, ಮಧುಮೇಹ, ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದರು ಎಂದು ಮಾಹಿತಿ ನೀಡಿದ್ದರು.

ಯಾರೂ ಏನೇ ಹೇಳಿದರೂ, ಜಯಲಲಿತಾ ಸಾವಿನ ಬಗ್ಗೆ ಇನ್ನೂ ಅನುಮಾನಗಳು ಬಗೆಹರಿದಿಲ್ಲ. ಇದೇ ಸಂದರ್ಭದಲ್ಲಿ ಸ್ಪೋಟಕ ಸುದ್ದಿಯೊಂದು ಅಪೊಲೊ ಆಸ್ಪತ್ರೆಯ ಮಾಜಿ ವೈದ್ಯರಿಂದಲೇ ಹೊರ ಬಿದ್ದಿದೆ.

2016 ರ ಸೆಪ್ಟಂಬರ್ 22 ರಂದು ಅಪೊಲೊ ಆಸ್ಪತ್ರೆಗೆ ಸೇರುವ ಮೊದಲೇ ಜಯಲಲಿತಾ ಅವರು ಮೃತಪಟ್ಟಿದ್ದರು. ಅವರ ಉಸಿರಾಟ ನಿಂತಿತ್ತು. ಅವರ ಮೃತದೇಹವನ್ನು ಸಂರಕ್ಷಿಸುವ ಪ್ರಯತ್ನಗಳು ನಡೆದು, ಲಂಡನ್ ವೈದ್ಯರನ್ನು ಕರೆಸಲಾಗಿತ್ತು ಎಂದು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದ ವೈದ್ಯೆ ಡಾ. ರಾಮಸೀತಾ ತಿಳಿಸಿದ್ದಾರೆ.

ಒಂದು ವೇಳೆ ಸರ್ಕಾರ ತನಿಖೆಗೆ ಮುಂದಾದಲ್ಲಿ ತಮಗೆ ಗೊತ್ತಿರುವ ಮಾಹಿತಿ ಹೇಳುವುದಾಗಿ ಡಾ. ರಾಮಸೀತಾ ಹೇಳಿದ್ದಾರೆ. ಅಪೊಲೊ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಅವರು, ಜಯಲಲಿತಾ ಆಸ್ಪತ್ರೆ ಸೇರಿದ ನಂತರದಲ್ಲಿನ ಬೆಳವಣಿಗೆಗಳಿಂದ ಭಯಗೊಂಡು ರಾಜೀನಾಮೆ ನೀಡಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...