alex Certify
ಕನ್ನಡ ದುನಿಯಾ       Mobile App
       

Kannada Duniya

ಸೋದರ ಸೊಸೆ ದೀಪಾಳಲ್ಲಿ ‘ಅಮ್ಮ’ನನ್ನು ಕಂಡ ಅಭಿಮಾನಿಗಳು

deepa

ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾರ ಸಮಾಧಿ ಸ್ಥಳಕ್ಕೆ ಬಂದಿದ್ದ ಮಹಿಳೆಯೊಬ್ರು ಎಲ್ಲರ ಗಮನ ಸೆಳೆದಿದ್ರು. ಆಕೆ ಬೇರೆ ಯಾರೂ ಅಲ್ಲ ಜಯಲಲಿತಾರ ಸೋದರ ಸೊಸೆ ದೀಪಾ.

ಆಕೆ ಥೇಟ್ ತನ್ನ ಅತ್ತೆಯನ್ನೇ ಹೋಲುತ್ತಿದ್ದು,  ಜಯಲಲಿತಾರನ್ನು ನೆನಪಿಸಿದ್ರು. ಸಂಜೆ ಸುಮಾರು 5.30 ರ ವೇಳೆಗೆ ಜಯಾ ಸಮಾಧಿ ಬಳಿ ಅಭಿಮಾನಿಗಳ ಸಂಖ್ಯೆ ವಿರಳವಾಗಿತ್ತು. ಆಗ ದೀಪಾ ಮತ್ತವರ ಕುಟುಂಬ ಸದಸ್ಯರು ಆಗಮಿಸಿದ್ರು. ಅವರನ್ನು ಸುತ್ತುವರಿದ ಅಭಿಮಾನಿಗಳು, ನಿಮ್ಮನ್ನು ನೋಡಿದ್ರೆ ಅಮ್ಮ ನೆನಪಾಗ್ತಾರೆ, ಅವರನ್ನು ನಿಮ್ಮ ಮುಖದಲ್ಲಿ ಕಾಣುತ್ತೇವೆ ಎಂದ್ರು. ಕೆಲವರು ಅವರ ಫೋಟೋ ತೆಗೆಯಲು ಶುರುಮಾಡಿದ್ರು, ಜೊತೆಗೆ ಬರಲಾರಂಭಿಸಿದ್ರು. ಅಭಿಮಾನಿಗಳ ಸಂಖ್ಯೆ ಹೆಚ್ಚಾಗ್ತಿದ್ದಂತೆ ಅಲ್ಲಿಂದ ಪೊಲೀಸರು ಅವರನ್ನು ಸುರಕ್ಷಿತವಾಗಿ ಕರೆದೊಯ್ದರು.

ಕಳೆದ ಭಾನುವಾರ ಜಯಲಲಿತಾ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆದಾಗಲೂ ಅತ್ತೆಯನ್ನು ಭೇಟಿಯಾಗುವ ಹಂಬಲದಿಂದ ದೀಪಾ ಅಪೊಲೋ ಆಸ್ಪತ್ರೆಗೆ ಬಂದಿದ್ದರು, ಆದ್ರೆ ಅವಕಾಶ ಸಿಕ್ಕಿರಲಿಲ್ಲ. ದೀಪಾ, ಜಯಲಲಿತಾರ ಸಹೋದರ ಜಯಕುಮಾರ್ ಅವರ ಪುತ್ರಿ. ಈ ಮೊದಲು ಕೂಡ ಜಯಾರನ್ನು ಭೇಟಿಯಾಗಲು 3 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಾದಿದ್ದರು. ಆದ್ರೆ ಅಧಿಕಾರಿಗಳು ಆಕೆಯನ್ನು ಒಳಕ್ಕೆ ಬಿಟ್ಟಿರಲಿಲ್ಲ.

ಜಯಲಲಿತಾ ಅಂತಿಮ ದರ್ಶನದ ಸಂದರ್ಭದಲ್ಲೂ ದೀಪಾ ಅವರಿಗೆ ಸ್ಥಳದಲ್ಲಿ ಹೆಚ್ಚು ಹೊತ್ತು ಇರಲು ಅವಕಾಶ ಕೊಟ್ಟಿರಲಿಲ್ಲ. ಶಶಿಕಲಾ ಮತ್ತವರ ಕುಟುಂಬದವರು ಆಕ್ರಮಿಸಿಕೊಂಡಿದ್ರು. ಖುದ್ದು ಜಯಲಲಿತಾ, ಶಶಿಕಲಾ ಕುಟುಂಬದವರನ್ನು ಕೆಲವು ದಿನಗಳಿಂದ ದೂರವೇ ಇಟ್ಟಿದ್ದರು. ಆದ್ರೆ ಜಯಾ ಸಾವಿನ ಬಳಿಕ ದಿಢೀರನೆ ಶಶಿಕಲಾ ಮತ್ತವರ ಕುಟುಂಬದವರು ಹತ್ತಿರವಾಗಿದ್ದರು. ಎಲ್ಲಾ ಕಾರ್ಯದಲ್ಲೂ ಮುಂದಾಳತ್ವ ವಹಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...