alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾರ ಜೈವಿಕ ಮಾದರಿ ಇಲ್ಲವೆಂದ ಆಸ್ಪತ್ರೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ, ಜಯಲಲಿತಾ ಅವರು ದಾಖಲಾಗಿದ್ದ ಚೆನ್ನೈನ ಅಪೋಲೋ ಆಸ್ಪತ್ರೆ, ಜಯಲಲಿತಾ ಅವರಿಗೆ ಸಂಬಂಧಿಸಿದ ಯಾವುದೇ ಜೈವಿಕ ಮಾದರಿ ತಮ್ಮ ಬಳಿ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಗೆ ಹೇಳಿದೆ.

ಬೆಂಗಳೂರು ಮೂಲದ ಅಮೃತಾ ಎನ್ನುವವರು ತಾವು ಜಯಲಲಿತಾರ ಜೈವಿಕ ಮಗಳು ಎಂಬುದಾಗಿ ಹೇಳಿಕೊಂಡಿದ್ದರು. ಈ ಕುರಿತಾಗಿ ಕೋರ್ಟ್ ವಿಚಾರಣೆ ಕೈಗೊಂಡಿದ್ದು, ಡಿಎನ್ ಎ ಸಾಬೀತು ಮಾಡಲು ಹೇಳಿತ್ತು. ಆದರೆ ಅಮ್ಮಾ ದಾಖಲಾಗಿದ್ದ ಅಪೊಲೋ ಆಸ್ಪತ್ರೆ ಯಾವುದೇ ಜೈವಿಕ ಮಾದರಿ ತಮ್ಮ ಬಳಿ ಇಲ್ಲ ಎಂದು ಕೋರ್ಟ್ಗೆ ತಿಳಿಸಿದೆ.

ಜಯಲಲಿತಾ ಅವರ ಸೋದರಳಿಯ ದೀಪಕ್ ಹಾಗೂ ಸೋದರ ಸೊಸೆ ದೀಪಾ, ಅಮೃತಾ ಅವರ ವಾದವನ್ನು ಅಲ್ಲಗಳೆದಿದ್ದರು. ಇನ್ನು ಈ ಕುರಿತು ಅಲ್ಲಿನ ರಾಜ್ಯ ಸರ್ಕಾರ ಕೂಡ ಯಾವುದೇ ಸಾಕ್ಷಾಧಾರ ಇಲ್ಲವೆಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...