alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಾ ಸೋಲಿನ ರಹಸ್ಯ ಬಿಚ್ಚಿಟ್ಟ ರಜನಿಕಾಂತ್

jj-ra

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ಹಿನ್ನಲೆಯಲ್ಲಿ, ಚೆನ್ನೈನಲ್ಲಿ ದಕ್ಷಿಣ ಭಾರತ ಕಲಾವಿದರ ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್, 1996 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಜಯಲಲಿತಾ ಅವರ ಸೋಲಿಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಯಲಲಿತಾ ಅವರ ವಿರುದ್ಧ ನಾನು ಬಹಿರಂಗವಾಗಿ ಟೀಕಿಸಿದ್ದು ಮತ್ತು ಆರೋಪಗಳನ್ನು ಮಾಡಿದ್ದೇ ಸೋಲಿಗೆ ಕಾರಣವಾಯ್ತು ಎಂದು ತಿಳಿಸಿದ್ದಾರೆ.

ಜಯಲಲಿತಾ ಮತ್ತೆ ಅಧಿಕಾರಕ್ಕೆ ಬಂದರೆ ದೇವರು ಕೂಡ ತಮಿಳುನಾಡನ್ನು ರಕ್ಷಿಸಲಾರ ಎಂದೆಲ್ಲಾ ನಾನು ಹೇಳಿದ್ದೆ. ನನ್ನ ಹೇಳಿಕೆಯಿಂದಾಗಿ ಅವರು ಬೇಸರವಾಗಿದ್ದರು. ಅಂದಿನ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರು. ಅದಕ್ಕೆ ನಾನು ಪ್ರಮುಖ ಕಾರಣವಾಗಿದ್ದೆ ಎಂದು ಹೇಳಿದ್ದಾರೆ.

ಆದಾದ ಬಳಿಕ ಪುತ್ರಿಯ ಮದುವೆಗಾಗಿ ಜಯಲಲಿತಾ ಅವರನ್ನು ಆಹ್ವಾನಿಸಲು ನಾನು ಭಾರದ ಹೃದಯದಿಂದಲೇ ಹೋದಾಗ ಆತ್ಮೀಯತೆಯಿಂದಲೇ ಮಾತನಾಡಿದ್ದರು. ಮಗಳ ಮದುವೆಗೂ ಬಂದಿದ್ದರು. ಅವರು ಹೃದಯ ಶ್ರೀಮಂತಿಕೆ ಹೊಂದಿದ ವ್ಯಕ್ತಿಯಾಗಿದ್ದರು. ಜಯಲಲಿತಾ ಅಪರೂಪದ ವಜ್ರ ಎಂದು ರಜನಿಕಾಂತ್ ಸ್ಮರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...