alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಪತ್ರೆಯಲ್ಲಿ ಕಣ್ಣೀರಿಟ್ಟ ಶಶಿಕಲಾ, ಪನ್ನೀರ್ ಸೆಲ್ವಂ

paneer-selvamಹೃದಯಾಘಾತಕ್ಕೊಳಗಾಗಿ ಚೆನ್ನೈನ ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾರ ಆರೋಗ್ಯ ಸ್ಥಿತಿ ತೀವ್ರವಾಗಿ ಬಿಗಡಾಯಿಸಿದೆ ಎನ್ನಲಾಗಿದ್ದು, ಜಯಲಲಿತಾ ಆಪ್ತೆ ಶಶಿಕಲಾ, ಸಚಿವ ಪನ್ನೀರ್ ಸೆಲ್ವಂ ಸೇರಿದಂತೆ ಹಲವು ಸಚಿವ, ಶಾಸಕರು ಆಸ್ಪತ್ರೆಯಲ್ಲೇ ಕಣ್ಣೀರಿಟ್ಟಿದ್ದಾರೆ.

ಜಯಲಲಿತಾರ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಿದೆ ಎಂಬ ಮಾಹಿತಿಯನ್ನು ಆಸ್ಪತ್ರೆಯ ಮೂಲಗಳು ಪನ್ನೀರ್ ಸೆಲ್ವಂ ಸೇರಿದಂತೆ ಜಯಲಲಿತಾ ಸಚಿವ ಸಂಪುಟ ಸದಸ್ಯರಿಗೆ ನೀಡಿದ್ದು, ಹೀಗಾಗಿ ಇಂದು ಬೆಳಿಗ್ಗೆ ಎಐಎಡಿಎಂಕೆ ಪಕ್ಷದ ಕಛೇರಿಯಲ್ಲಿ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಿ ಸಚಿವ, ಶಾಸಕರೆಲ್ಲರೂ ಆಸ್ಪತ್ರೆಯಲ್ಲೇ ಜಮಾಯಿಸಿದ್ದಾರೆ.

ಇತ್ತ ಆಸ್ಪತ್ರೆಯ ಹೊರಗಡೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿರುವ ಜಯಲಲಿತಾ ಅಭಿಮಾನಿಗಳು ಹಾಗೂ ಎಐಎಡಿಎಂಕೆ ಕಾರ್ಯಕರ್ತರ ರೋದನ ಮುಗಿಲು ಮುಟ್ಟಿದ್ದು, ಅಮ್ಮಾ ಆರೋಗ್ಯವಾಗಿ ಬರಲಿ ಎಂದು ದೇವರಿಗೆ ಹರಕೆ ಹೊತ್ತುಕೊಳ್ಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...