alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಮರುಜೀವ

jaya

ನೆರೆರಾಜ್ಯ ತಮಿಳುನಾಡು, ನೂತನ ಸಿಎಂ ಶಶಿಕಲಾ ನಟರಾಜನ್ ಪದಗ್ರಹಣಕ್ಕೆ ಸಜ್ಜಾಗಿದ್ರೆ ಇತ್ತ ಕರ್ನಾಟಕ, ದಿವಂಗತ ಮಾಜಿ ಸಿಎಂ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣಕ್ಕೆ ಮತ್ತೆ ಜೀವ ತುಂಬಿದೆ. ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಬಾಕಿ ಇದ್ದು, ಸುಪ್ರೀಂ ಕೋರ್ಟ್ ಮುಂದೆ ವಿಶೇಷ ಮನವಿ ಸಲ್ಲಿಸಲು ಕರ್ನಾಟಕ ಮುಂದಾಗಿದೆ.

2 ತಿಂಗಳ ಹಿಂದಷ್ಟೆ ಜಯಲಲಿತಾ ನಿಧನರಾಗಿದ್ದು, ಪ್ರಕರಣ ಆರೋಪಿಗಳ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡುವ ಬಗ್ಗೆ ಮನವಿಯಲ್ಲಿ ಉಲ್ಲೇಖ ಮಾಡಲಿದೆ. ಪ್ರಕರಣದಿಂದ ಜಯಾ ಹೆಸರನ್ನು ಡಿಲೀಟ್ ಮಾಡುವಂತೆ ಹಾಗೂ ಆದಷ್ಟು ಬೇಗ ತೀರ್ಪು ನೀಡುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲು ನಿರ್ಧರಿಸಿದೆ.

ವಿಶೇಷ ಸರ್ಕಾರಿ ಅಭಿಯೋಜಕ ಬಿ.ವಿ. ಆಚಾರ್ಯ ಈ ವಿಷಯ ತಿಳಿಸಿದ್ದಾರೆ. ಸದ್ಯ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ನಟರಾಜನ್, ಪುತ್ರ ವಿ.ಎನ್.ಸುಧಾಕರ್ ಹಾಗೂ ಇಳವರಸಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. 100 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಯಲಲಿತಾ ಹಾಗೂ ಉಳಿದ ಮೂವರು ಅಪರಾಧಿಗಳೆಂದು 2014ರಲ್ಲಿ ಬೆಂಗಳೂರಿನ ವಿಶೇಷ ಕೋರ್ಟ್ ತೀರ್ಪು ನೀಡಿತ್ತು, 4 ವರ್ಷ ಸೆರೆವಾಸ ವಿಧಿಸಿತ್ತು.

2015ರ ಮೇನಲ್ಲಿ ಕರ್ನಾಟಕ ಹೈಕೋರ್ಟ್ ಜಯಾ ನಿರ್ದೋಷಿಯೆಂದು ತೀರ್ಪು ನೀಡಿತ್ತು. ಈ ಪ್ರಕರಣ ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದಲ್ಲಿ ಮೂವರು ದೋಷಿಗಳೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಲ್ಲಿ ಶಶಿಕಲಾ ಮತ್ತು ಎಐಎಡಿಎಂಕೆ ಪಕ್ಷಕ್ಕೆ ಭಾರೀ ಹಿನ್ನಡೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...