alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ಸಾವಿನ ನಿಗೂಢ ರಹಸ್ಯ ಬಿಚ್ಚಿಟ್ಟ ಶಶಿಕಲಾ ಸಹೋದರ

ತಿರುಚ್ಚಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಕುರಿತಾಗಿ ಅನುಮಾನಗಳಿದ್ದು, ತನಿಖೆ ನಡೆಸಲಾಗ್ತಿದೆ. ಇದೇ ಸಂದರ್ಭದಲ್ಲಿ ಜಯಲಲಿತಾ ಆಪ್ತರಾಗಿದ್ದ ಶಶಿಕಲಾ ಅವರ ಸಹೋದರ ಸ್ಪೋಟಕ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಶಶಿಕಲಾ ಅವರ ಸಹೋದರ ದಿವಾಕರನ್ ತಿರುವರೂರು ಜಿಲ್ಲೆಯ ಮನ್ನಾರ್ ಗುಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಜಯಲಲಿತಾ ಅವರು ಡಿಸೆಂಬರ್ 4 ರಂದು ಸಂಜೆ 5.15 ಕ್ಕೆ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರು ಮೃತಪಟ್ಟ ಸುದ್ದಿಯನ್ನು ಡಿಸೆಂಬರ್ 5 ರಂದು ಬಹಿರಂಗಪಡಿಸಲಾಯಿತು ಎಂದು ತಿಳಿಸಿದ್ದಾರೆ.

ಆಸ್ಪತ್ರೆಯ ಸುರಕ್ಷತೆ ಮತ್ತು ಭದ್ರತೆಯ ಕಾರಣದಿಂದ ಜಯಲಲಿತಾ ಅವರ ಸಾವಿನ ಸುದ್ದಿಯನ್ನು ಬಹಿರಂಗಪಡಿಸಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಜಯಲಲಿತಾ ಅವರು ನಿಧನರಾದ ಬಳಿಕ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಹಿಂದಿನ ದಿನವೇ ಅವರು ಮೃತಪಟ್ಟಿದ್ದರೂ, ಆಸ್ಪತ್ರೆಯವರು ಬಹಿರಂಗಪಡಿಸಿರಲಿಲ್ಲ ಎಂದು ಹೇಳಿದ್ದಾರೆ.

ಆದರೆ, ಅಪೊಲೊ ಆಸ್ಪತ್ರೆಯಿಂದ ಈ ಕುರಿತಾಗಿ ಸ್ಪಷ್ಟನೆ ನೀಡಲಾಗಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ. ನಿಯಮಗಳೆಲ್ಲವನ್ನು ಪಾಲಿಸಲಾಗಿದೆ. ಜಯಲಲಿತಾ ಅವರು ನಿಧನರಾದ ಕೂಡಲೇ ಮಾಹಿತಿ ನೀಡಲಾಗಿದೆ. ಹೀಗಿದ್ದರೂ, ಅನಗತ್ಯವಾಗಿ ಗೊಂದಲ ಸೃಷ್ಠಿಸಲಾಗುತ್ತಿದೆ ಎಂದು ದೂರಲಾಗಿದೆ.

ಜಯಲಲಿತಾ ಅವರ ಸಾವಿನ ಕುರಿತಾಗಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ದಿವಾಕರನ್ ಇಂತಹ ಹೇಳಿಕೆ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...