alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ಸಾವಿಗೂ ಮುನ್ನ ನಡೆದಿದ್ದೇನು? ಇಲ್ಲಿದೆ ಶಶಿಕಲಾ ಬಿಚ್ಚಿಟ್ಟ ವಿವರ

ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ಬಗ್ಗೆ ಇನ್ನೂ ಅನುಮಾನಗಳು ಹುಟ್ಟಿಕೊಳ್ಳುತ್ತಲೇ ಇವೆ. ಜಸ್ಟಿಸ್ ಎ.ಆರ್ಮುಗಸ್ವಾಮಿ ಆಯೋಗ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಜಯಾ ಆಪ್ತೆ ಶಶಿಕಲಾರನ್ನು ವಿಚಾರಣೆ ಮಾಡಿದೆ.

2016ರ ಸಪ್ಟೆಂಬರ್ 26ರಂದು ಜಯಲಲಿತಾ ಸ್ನಾನದ ಕೋಣೆಯಲ್ಲಿ ಕುಸಿದು ಬಿದ್ದಿದ್ದರು. ಆದ್ರೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು ಅಂತಾ ಶಶಿಕಲಾ ಹೇಳಿದ್ದಾರೆ. ಆಸ್ಪತ್ರೆಗೆ ಜಯಾರನ್ನು ಸಾಗಿಸುವ ಮುನ್ನ ಅವರ ನಿವಾಸದಲ್ಲಿ ಏನು ನಡೀತು ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸಲಾಗಿದೆ.

ಆ ಸಮಯದಲ್ಲಿ ಜಯಲಲಿತಾರ ಅನುಮತಿ ಮೇರೆಗೆ ಶಶಿಕಲಾ, ಅವರ ವಿಡಿಯೋ ಮಾಡಿದ್ದರಂತೆ. ಆ ನಾಲ್ಕು ವಿಡಿಯೋಗಳನ್ನು ಆಯೋಗಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಓ. ಪನ್ನೀರಸೆಲ್ವಂ ಹಾಗೂ ತಂಬಿದೊರೈ ಸಹ ಜಯಾರನ್ನು ಭೇಟಿ ಮಾಡಿದ್ದರು ಅಂತಾ ಹೇಳಿದ್ದಾರೆ.

ಪೋಯಸ್ ಗಾರ್ಡನ್ ನಿವಾಸದ ಮೊದಲ ಮಹಡಿಯಲ್ಲಿರೋ ಸ್ನಾನದ ಕೋಣೆಗೆ ಹಲ್ಲುಜ್ಜಲು ತೆರಳಿದ್ದ ಜಯಲಲಿತಾ ಅಲ್ಲೇ ಕುಸಿದು ಬಿದ್ದಿದ್ದರು. ಆಕೆಗೆ ಪ್ರಜ್ಞೆ ತಪ್ಪಿತ್ತು. ಆದ್ರೆ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಆಂಬ್ಯುಲೆನ್ಸ್ ನಲ್ಲೇ ಜಯಾಗೆ ಪ್ರಜ್ಞೆ ಮರಳಿತ್ತು.

ಆಕೆ ನನಗೆ ಕರೆ ಮಾಡಿದ್ದರು. ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು. ಆದ್ರೆ ನಾನು ಒಪ್ಪದೇ ವೈದ್ಯರಿಗೆ ಕರೆ ಮಾಡಿದೆ ಎಂದಿದ್ದಾರೆ ಶಶಿಕಲಾ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ಹಾಗೂ ಶಿಕ್ಷೆಗೆ ಸಂಬಂಧಪಟ್ಟಂತೆ 2014ರಲ್ಲೇ ಒತ್ತಡಕ್ಕೆ ಒಳಗಾಗಿದ್ದ ಜಯಲಲಿತಾ ಅನಾರೋಗ್ಯಕ್ಕೆ ತುತ್ತಾಗಿದ್ದರು ಅಂತಾ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...