alex Certify
ಕನ್ನಡ ದುನಿಯಾ       Mobile App
       

Kannada Duniya

ಇಡ್ಲಿ ಮೂಲಕ ಅಮ್ಮನಿಗೆ ಅಭಿಮಾನಿಗಳ ಅಶ್ರುತರ್ಪಣ

amma-idli

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಇಹಲೋಕ ತ್ಯಜಿಸಿದ್ದರೂ ಜನರ ಮನಸ್ಸಿನಿಂದ ಮಾತ್ರ ಇನ್ನೂ ಮರೆಯಾಗಿಲ್ಲ. ಅಮ್ಮನ ನೆನಪಿನಲ್ಲಿ ಅಭಿಮಾನಿಗಳು ಅವರನ್ನೇ ಹೋಲುವ 68 ಕೆಜಿ ತೂಕದ ಇಡ್ಲಿಯನ್ನು ತಯಾರಿಸಿದ್ದಾರೆ.

ಚೆನ್ನೈನ ಮರೀನಾ ಬೀಚ್ ನಲ್ಲಿ ಜಯಲಲಿತಾ ಮುಖವನ್ನು ಹೋಲುವ ಈ ಇಡ್ಲಿಯನ್ನು ತಯಾರಿಸಲಾಗಿದೆ. ಈ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಜಯಲಲಿತಾ ಡಿಸೆಂಬರ್ 5ರಂದು ಇಹಲೋಕ ತ್ಯಜಿಸಿದ್ದರು. ಜಯಾರ ಅಕಾಲಿಕ ಮರಣದಿಂದ ಆಘಾತಗೊಂಡು ತಮಿಳುನಾಡಿನಲ್ಲಿ 597 ಮಂದಿ ಸಾವನ್ನಪ್ಪಿರುವುದಾಗಿ ಎಐಎಡಿಎಂಕೆ ಹೇಳಿದೆ. ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಈ ಮಧ್ಯೆ ಜಯಲಲಿತಾ ಅವರಿಗೆ ‘ಭಾರತ ರತ್ನ’ ಪುರಸ್ಕಾರ ನೀಡಬೇಕೆಂಬ ಒತ್ತಾಯ ಕೂಡ ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...