alex Certify
ಕನ್ನಡ ದುನಿಯಾ       Mobile App
       

Kannada Duniya

ಅಪೊಲೊ ಆಸ್ಪತ್ರೆ ಬಳಿ ಲಾಠಿ ಚಾರ್ಜ್

jayalalithaa-apollo-hospital

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ತಮಿಳನಾಡಿನ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಚೆನ್ನೈನ ಅಪೊಲೊ ಆಸ್ಪತ್ರೆ ಬಳಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಒಳ ನುಗ್ಗಲು ಯತ್ನಿಸಿದ್ದಾರೆ.

ಸಾವಿರಾರು ಮಂದಿ ಒಮ್ಮೆಲೆ ಬ್ಯಾರಿಕೇಡ್ ಗಳನ್ನು ನೂಕಿ ಒಳನುಗ್ಗಲು ಯತ್ನಿಸಿದಾಗ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಜಯಲಲಿತಾ ಅವರನ್ನು ನೋಡಲು ಒಳಬಿಡಬೇಕೆಂದು ಬೆಂಬಲಿಗರು, ಅಭಿಮಾನಿಗಳು ಆಸ್ಪತ್ರೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೊದಲೇ ಭದ್ರತೆಯಲ್ಲಿದ್ದ ಅರೆಸೇನಾ ಪಡೆ ಸಿಬ್ಬಂದಿ ಮತ್ತು ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದ್ದಾರೆ.

ಜಯಲಲಿತಾ ನಿಧನದ ಸುದ್ದಿ ಪ್ರಸಾರವಾಗುತ್ತಿದ್ದಂತೆ ಚೆನ್ನೈನ ವಿವಿಧೆಡೆ ಬೀದಿಗಿಳಿದ ಜನ ಕಲ್ಲು ತೂರಾಟ ನಡೆಸಿದ್ದಾರೆ. ಮಧುರೈ ಮೊದಲಾದ ಕಡೆಗಳಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಜಯಲಲಿತಾ ಅವರ ನಿಧನದ ಸುದ್ದಿಯನ್ನು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲವಾದರೂ, ಅಪೊಲೊ ಆಸ್ಪತ್ರೆ ಸಿಬ್ಬಂದಿ ಸಚಿವರು, ಶಾಸಕರಿಗೆ ನೀಡಿದ ಮಾಹಿತಿ ಆಧರಿಸಿ, ತಮಿಳು ಸುದ್ದಿವಾಹಿನಿಗಳಲ್ಲಿ ಜಯಲಲಿತಾ ಅವರ ನಿಧನದ ಸುದ್ದಿ ಪ್ರಸಾರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...