alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕಾರದಲ್ಲಿದ್ದಾಗಲೇ ಅಸ್ತಂಗತರಾದ ಮುಖ್ಯಮಂತ್ರಿಗಳಿವರು

jayala

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು 75 ದಿನಗಳ ಕಾಲ, ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

‘ಅಮ್ಮ’ನ ಚೇತರಿಕೆಗಾಗಿ ಪ್ರಾರ್ಥಿಸಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು, ಆಸ್ಪತ್ರೆಯಿಂದ ಬಿಡುಗಡೆಯಾಗಲಿರುವ ಜಯಲಲಿತಾರನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಆದರೆ, ಆಸ್ಪತ್ರೆಯಿಂದ ಶವವಾಗಿ ಹೊರಬಂದಿದ್ದಾರೆ ಜಯಲಲಿತಾ. ತಮಿಳುನಾಡಿನ ಮುಖ್ಯಮಂತ್ರಿಯಾಗಿ 6 ಬಾರಿ ಆಡಳಿತ ನಡೆಸಿದ ಮಹಾನ್ ನಾಯಕಿ. ಮುಖ್ಯಮಂತ್ರಿಯಾಗಿದ್ದಾಗಲೇ ಅವರು ಅಸ್ತಂಗತರಾಗಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗಲೇ ತಮಿಳುನಾಡಿನಲ್ಲಿ ಮೂವರು ನಿಧನರಾಗಿದ್ದಾರೆ. ಸಿ.ಎನ್. ಅಣ್ಣಾ ದೊರೈ, ಎಂ.ಜಿ. ರಾಮಚಂದ್ರನ್ ಹಾಗೂ ಜಯಲಲಿತಾ ಅವರು ಅಧಿಕಾರದಲ್ಲಿದ್ದಾಗಲೇ ಮೃತಪಟ್ಟಿದ್ದಾರೆ.

ಅಧಿಕಾರದಲ್ಲಿದ್ದ ಸಂದರ್ಭದಲ್ಲೇ ಮೃತಪಟ್ಟ ಮುಖ್ಯಮಂತ್ರಿಗಳಿವರು:

ಅಸ್ಸಾಂ- ಗೋಪಿನಾಥ್ ಬ್ರಡೋಲೈ(1950), ಮಧ್ಯಪ್ರದೇಶ- ರವಿಶಂಕರ್ ಶುಕ್ಲಾ(1956), ಬಿಹಾರ-ಶ್ರೀಕೃಷ್ಣಸಿಂಗ್(1961), ಪಶ್ಚಿಮ ಬಂಗಾಳ -ಬಿಧನ್ ಚಂದ್ರ ರಾಯ್(1962), ಮಹಾರಾಷ್ಟ್ರ- ಮರಾಠ್ ರಾವ್(1963), ತಮಿಳುನಾಡು- ಸಿ.ಎನ್. ಅಣ್ಣಾದೊರೈ(1969), ಗೋವಾ- ದಯಾನಂದ ಬಂಡೋಡ್ಕರ್( 1973), ರಾಜಸ್ತಾನ-ಬರ್ಖತ್ ವುಲ್ಲಾ ಖಾನ್(1973), ಜಮ್ಮು ಮತ್ತು ಕಾಶ್ಮೀರ-ಶೇಖ್ ಅಬ್ದುಲ್ಲಾ(1982), ತಮಿಳುನಾಡು- ಎಂ.ಜಿ.ರಾಮಚಂದ್ರನ್(1987), ಗುಜರಾತ್-ಚಮ್ಮನ್ ಭಾಯ್ ಪಟೇಲ್(1994), ಪಂಜಾಬ್-ಬಿಂಟ್ ಸಿಂಗ್(1995), ಆಂಧ್ರಪ್ರದೇಶ-ವೈ.ಎಸ್.ರಾಜಶೇಖರ್ ರೆಡ್ಡಿ(2009), ಅರುಣಾಚಲ ಪ್ರದೇಶ-ದೋರ್ಜಿ ಖಂಡು(2011), ಜಮ್ಮು ಮತ್ತು ಕಾಶ್ಮೀರ-ಮುಫ್ತಿ ಮೊಹಮ್ಮದ್ ಸಯೀದ್(ಜನವರಿ, 2016), ತಮಿಳುನಾಡು-ಜಯಲಲಿತಾ(ಡಿಸೆಂಬರ್ 5, 2016).

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...