alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮ್ಮ’ನಿಗೆ ಸೇನೆಯಿಂದ ಗೌರವ

mareena

ಚೆನ್ನೈ: ಇಲ್ಲಿನ ಮರೀನಾ ಬೀಚ್ ನಲ್ಲಿರುವ ಎಂ.ಜಿ.ಆರ್. ಸ್ಮಾರಕದ ಪಕ್ಕದಲ್ಲೇ, ಜಯಲಲಿತಾ ಅವರ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದ್ದು, ರಾಜಾಜಿ ಹಾಲ್ ನಿಂದ ಅಂತಿಮ ಯಾತ್ರೆ ನಡೆಸಲಾಯಿತು. ಸಮಾಧಿ ಸ್ಥಳದಲ್ಲಿ ಜಯಲಲಿತಾ ಅವರ ಪಾರ್ಥಿವ ಶರೀರ ಇರಿಸಿದ ಬಳಿಕ ಸೇನೆಯಿಂದ ಗೌರವ ಸಲ್ಲಿಸಲಾಯಿತು.

ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಲೋಕಸಭೆ ಡೆಪ್ಯುಟಿ ಸ್ಪೀಕರ್ ತಂಬಿದೊರೈ, ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬೀ ಆಜಾದ್, ರಾಜ್ಯಪಾಲ ವಿದ್ಯಾಸಾಗರ್ ರಾವ್, ಮಾಜಿ ರಾಜ್ಯಪಾಲ ರೋಸಯ್ಯ, ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸೇರಿದಂತೆ ಅನೇಕ ಗಣ್ಯರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಗಲಿದ ನಾಯಕಿಯ ಅಂತ್ಯ ಸಂಸ್ಕಾರ ನಡೆದಿದೆ. ಎಲ್.ಇ.ಡಿ. ಸ್ಕ್ರೀನ್ ನಲ್ಲಿ ‘ಅಮ್ಮ’ನ ಕಂಡು ಲಕ್ಷಾಂತರ ಮಂದಿಯ ಕಣ್ಣುಗಳು ಒದ್ದೆಯಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...