alex Certify
ಕನ್ನಡ ದುನಿಯಾ       Mobile App
       

Kannada Duniya

ಕಾದ ಮರಳಿನ ಮೇಲೆ ಹಪ್ಪಳ ಸುಟ್ಟುಕೊಂಡ ಯೋಧರು

pappad on sandಮರಳುಗಾಡು ರಾಜಸ್ಥಾನದಲ್ಲಿ ಭೂಮಿ ಕುದಿಯುತ್ತಿದೆ. ಬಿಸಿ ಗಾಳಿಗೆ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಉಷ್ಣಾಂಶ 55 ಡಿಗ್ರಿ ಸಮೀಪಿಸಿದೆ ಅಂದರೆ ಬಿಸಿಲಿನ ಝಳದ ತೀವ್ರತೆಯನ್ನು ಅರಿಯಬಹುದಾಗಿದೆ.

ಭಾರತ- ಪಾಕಿಸ್ತಾನ ಗಡಿ ಭಾಗವಾದ ಜೈಸಲ್ಮೇರ್ ನಲ್ಲಿ ಉಷ್ಣಾಂಶ 55 ಡಿಗ್ರಿ ದಾಖಲಾಗಿದೆ ಎನ್ನಲಾಗಿದೆ. ಇಲ್ಲಿರುವ ಗಡಿ ಭದ್ರತಾ ಪಡೆಯ ಯೋಧರು ಕಾದ ಮರಳಿನ ಮೇಲೆ ಹಪ್ಪಳ ಸುಟ್ಟುಕೊಂಡು ತಿಂದಿದ್ದಾರೆ. ಒಲೆಯ ಸಹಾಯವಿಲ್ಲದೇ ಕಾದ ಮರಳಿನ ಮೇಲೆ ಪಾತ್ರೆಯನ್ನಿಟ್ಟು ಅನ್ನವನ್ನೂ ಮಾಡಿಕೊಳ್ಳಬಹುದಾಗಿದೆ ಎಂದು ಹೇಳುತ್ತಾರೆ ಯೋಧರು. ಯೋಧರು ಧರಿಸುವ ಷೂ ಗಳು ಬಿಸಿಲಿನ ಹೊಡೆತಕ್ಕೆ ಕರಗುತ್ತಿವೆ ಎನ್ನಲಾಗಿದೆ. ಹೀಗಾಗಿ ಒಂಟೆಗಳ ಮೇಲೆ ಕುಳಿತು ಸಂಚರಿಸುತ್ತ ಗಡಿಯನ್ನು ಕಾಯುತ್ತಿದ್ದಾರೆ.

ಈ ಪರಿಯ ಉಷ್ಣಾಂಶ ದಾಖಲಾಗಿರುವುದು ಇದೇ ಮೊದಲೆಂದು ಹೇಳಲಾಗುತ್ತಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯೋಧರಿಗೆ ಕ್ಯಾಪ್, ಕನ್ನಡಕ ಹಾಗೂ ವಿಶೇಷ ಉಡುಪುಗಳನ್ನು ನೀಡಲಾಗಿದೆ. ಜೊತೆಗೆ ನೀರಿನ ಬಾಟಲುಗಳನ್ನು ಕಡ್ಡಾಯವಾಗಿ ತಮ್ಮೊಂದಿಗೆ ಕೊಂಡೊಯ್ಯುವಂತೆ ಸೂಚಿಸಲಾಗಿದೆ. ದೇಶದ ದಕ್ಷಿಣ ಭಾಗಗಳಲ್ಲಿ ಬಿರುಸಿನ ಮಳೆಯಾಗುತ್ತಿದ್ದರೆ ರಾಜಸ್ಥಾನ ಮಾತ್ರ ಬಿರು ಬಿಸಿಲಿಗೆ ತತ್ತರಿಸಿ ಹೋಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...