alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ನನ್ನ ಅಂತರಾಳದಲ್ಲಿದ್ದಾರೆ: ಜಶೋದಾ ಬೆನ್

phpthumb_generated_thumbnail

ಪ್ರಧಾನ ಮಂತ್ರಿ ನರೇಂದ್ರ ಮೋದಿ ನನ್ನ ಅಂತರಾಳದಲ್ಲಿದ್ದಾರೆಂದು ಪತ್ನಿ ಜಶೋದಾ ಬೆನ್ ಹೇಳಿದ್ದಾರೆ. ಪ್ರತಿದಿನ ಅವರಿಗಾಗಿ ಪೂಜೆ, ಪ್ರಾರ್ಥನೆ ಮಾಡ್ತೇನೆ ಎಂದು ಜಶೋದಾ ಬೆನ್ ತಿಳಿಸಿದ್ದಾರೆ.

ಉಜ್ಜಯನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಮೋದಿ ಸಾಧನೆಯನ್ನು ಶ್ಲಾಘಿಸಿದ್ರು. ನಾವಿಬ್ಬರೂ ದೇಶಕ್ಕಾಗಿ ನಮ್ಮ ಹೊಣೆಗಾರಿಕೆ ನಿಭಾಯಿಸುತ್ತಿದ್ದೇವೆ. ದೇಶದ ವಿಕಾಸ ಹಾಗೂ ಉನ್ನತಿಗಾಗಿ ಮೋದಿ ಕೆಲಸ ಮಾಡ್ತಿದ್ದಾರೆ. ನಾನು ಶಿಕ್ಷಕಿಯಾಗಿ ಮುಂದಿನ ಪೀಳಿಗೆಗೆ ರಾಷ್ಟ್ರಭಕ್ತಿಯ ನೀರೆರೆಯುತ್ತಿದ್ದೇನೆ ಎಂದ್ರು.

ಉತ್ತರ ಪ್ರದೇಶ ಚುನಾವಣಾ ಗೆಲುವಿನ ಬಗ್ಗೆಯೂ ಜಶೋದಾ ಬೆನ್ ಮಾತನಾಡಿದ್ರು.ಮೋದಿ ಮಾಡ್ತಿರುವ ಅಭಿವೃದ್ಧಿ ಕೆಲಸವೇ ಈ ಗೆಲುವಿಗೆ ಕಾರಣ ಎಂದ್ರು. ಮೋದಿ ನೇತೃತ್ವದಲ್ಲಿ ದೇಶ ಮತ್ತೆ ವಿಶ್ವಗುರು ಪಟ್ಟಕ್ಕೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು. ದೇಶಕ್ಕೆ 100 ಮೋದಿಗಳ ಅವಶ್ಯಕತೆ ಇದೆ. ಅವರು ಒಳ್ಳೆ ಕೆಲಸ ಮಾಡ್ತಿದ್ದಾರೆ. ಮತ್ತಷ್ಟು ಕೆಲಸ ಮಾಡುವ ನಿರೀಕ್ಷೆ ಇದೆ ಎಂದ್ರು.

ಮದನ ಮೋಹನ ಮಂದಿರ ಸೇರಿದಂತೆ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದ ಜಶೋದಾ ಬೆನ್ ವಿಶೇಷ ಪೂಜೆ ಸಲ್ಲಿಸಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...