alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವ ಮುಸ್ಲಿಂ ಸಮುದಾಯ

21_08_2016-janamastami-2

ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮದು. ಇಲ್ಲಿ ಜಾತಿ- ಧರ್ಮವೆಂಬ ಕಟ್ಟುಪಾಡುಗಳನ್ನು ಮೆಟ್ಟಿನಿಂತು ಹಿಂದೂ- ಮುಸ್ಲಿಂ ಐಕ್ಯತೆಯನ್ನು ಸಾರುವವರು ಅನೇಕರಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂಬಂತಿದೆ ಈ ರಾಜಸ್ತಾನದ ದರ್ಗಾ. ಇಲ್ಲಿ ಜಾತಿ- ಮತದ ಭೇದ ಮರೆತು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೆಮ್ಮೆಯಿಂದ ಆಚರಿಸುತ್ತಾರೆ.

ಜೈಪುರ್ ನಿಂದ ಸುಮಾರು 200 ಕಿ.ಮೀ. ದೂರದಲ್ಲಿನ ಝುಂಝೂನೂ ಜಿಲ್ಲೆಯ ಚಿರವಾದಲ್ಲಿರುವ ನರಹರ ದರ್ಗಾದ ಜನರು 3 ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಈ ದರ್ಗಾ ಶರೀಫ್ ಹಜರತ್ ಹಾಜಿಬ್ ಶಕರಬಾರ್ ದರ್ಗಾ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತದೆ.

ಜನ್ಮಾಷ್ಟಮಿಯ ಸಮಯದಲ್ಲಿ ಇಲ್ಲಿ ಸುಮಾರು 400 ಅಂಗಡಿಗಳು ಸಜ್ಜುಗೊಳ್ಳುತ್ತವೆ. ಜನ್ಮಾಷ್ಟಮಿಯ ದಿನ ರಾತ್ರಿ ಇಲ್ಲಿ ಕವ್ವಾಲಿ, ನೃತ್ಯ, ನಾಟಕಗಳನ್ನು ಆಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಸಮುದಾಯದ ಜನರೆಲ್ಲರೂ ಭಾಗವಹಿಸುತ್ತಾರೆ.

ಈ ದರ್ಗಾದಲ್ಲಿ ಕಳೆದ 300-400 ವರ್ಷದಿಂದಲೂ ಈ ಉತ್ಸವ ನಡೆದುಕೊಂಡು ಬಂದಿದೆ. ಉತ್ಸವದಲ್ಲಿ ಪಾಲ್ಗೊಳ್ಳಲು ಬಿಹಾರ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮುಂತಾದ ಅನೇಕ ರಾಜ್ಯಗಳಿಂದ ಜನರು ಬರುತ್ತಾರೆ. ಮುಸ್ಲಿಂ ಸಮುದಾಯದ ಮಕ್ಕಳು ಕೃಷ್ಣ- ರಾಧೆಯ ವೇಷದಲ್ಲಿ ಕಂಗೊಳಿಸಿದರೆ ಹಿಂದೂಗಳು ದರ್ಗಾಕ್ಕೆ ಹೂವು, ಚಾದರ, ತೆಂಗಿನಕಾಯಿ, ಸಿಹಿ ಮುಂತಾದವನ್ನು ಒಪ್ಪಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...