alex Certify
ಕನ್ನಡ ದುನಿಯಾ       Mobile App
       

Kannada Duniya

ಭಯೋತ್ಪಾದನೆಗೆ ಗುಡ್ ಬೈ ಹೇಳಿದ ಫುಟ್ಬಾಲ್ ಆಟಗಾರ

ಭಯೋತ್ಪಾದಕ ಸಂಘಟನೆ ಜೊತೆ ಕೈ ಜೋಡಿಸಿದ್ದ ಕಾಶ್ಮೀರದ ಫುಟ್ಬಾಲ್ ಆಟಗಾರ ಮಜೀದ್ ಇರ್ಶಾದ್ ಖಾನ್ ಗುರವಾರ ರಾತ್ರಿ 11.30ರ ಸುಮಾರಿಗೆ ಪೊಲೀಸರಿಗೆ ಶರಣಾಗಿದ್ದಾನೆ. ಮಜೀದ್ ಕುಟುಂಬಸ್ಥರು ಹಾಗೂ ಸ್ನೇಹಿತರ ಸಲಹೆ ಮೇರೆಗೆ ಮಜೀದ್ ದಕ್ಷಿಣ ಕಾಶ್ಮೀರದ ಡಿಐಜಿ ಮುಂದೆ ಶರಣಾಗಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಹುದೊಡ್ಡ ಅಭಿಯಾನ ನಡೆದಿತ್ತು. ಮಜೀದ್ ನಿಂದಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರು ಆತಂಕಕ್ಕೊಳಗಾಗಿದ್ದಾರೆ. ಆತ ಬೇಗ ಬರಲಿ ಎಂಬುದು ನಮ್ಮ ಆಸೆ. ಪೊಲೀಸರು ಕೂಡ ಆತ ವಾಪಸ್ ಬರ್ತಾನೆಂಬ ಭರವಸೆ ನೀಡಿದ್ದಾರೆಂದು ಮಜೀದ್ ತಂದೆ ಹೇಳಿದ್ದಾರೆ.

ಫುಟ್ಬಾಲ್ ಆಟಗಾರ 20 ವರ್ಷದ ಮಜೀದ್ ಭಯೋತ್ಪಾದಕ ಸಂಘಟನೆ ಜೊತೆ ಕೈಜೋಡಿಸಿದ್ದ. ಅಕ್ಟೋಬರ್ ಕೊನೆಯ ವೇಳೆಗೆ ಲಷ್ಕರ್ ಇ-ತೋಯ್ಬಾ ಸಂಘಟನೆಗೆ ಸೇರ್ಪಡೆಯಾಗಿದ್ದ. ಮಜೀದ್ ಗೆ ಭಯೋತ್ಪಾದಕ ಸ್ನೇಹಿತನೊಬ್ಬ ಇದ್ದ ಎನ್ನಲಾಗಿದೆ. ಆತ ಭದ್ರತಾ ಪಡೆ ಗುಂಡಿಗೆ ಸಾವನ್ನಪ್ಪಿದ್ದ. ಆತನ ಅಂತ್ಯಸಂಸ್ಕಾರದ ನಂತ್ರ ಮಜೀದ್ ಭಯೋತ್ಪಾದನಾ ಸಂಘಟನೆಗೆ ಸೇರಿದ್ದ.

ಮಜೀದ್ ಫೇಸ್ಬುಕ್ ಪೇಜ್ ಒಂದರಲ್ಲಿ ತಾನು ಭಯೋತ್ಪಾದನಾ ಸಂಘಟನೆಗೆ ಸೇರಿರುವುದಾಗಿ ಹೇಳಿದ್ದ. ಆದ್ರೆ ಆತನನ್ನು ವಾಪಸ್ ಕರೆತರಲು ಕುಟುಂಬಸ್ಥರು ಹಾಗೂ ಸ್ನೇಹಿತರು ಹರಸಾಹಸ ಪಟ್ಟಿದ್ದರು. ಆತನ ತಾಯಿ ಫೇಸ್ಬುಕ್ ನಲ್ಲಿ ವಿಡಿಯೋ ಹಾಕಿ ವಿನಂತಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...