alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿರೋ ವಿಡಿಯೋದಲ್ಲಿ ಯುವತಿ ತೆರೆದಿಟ್ಟಿದ್ದಾಳೆ ವೇಶ್ಯಾವಾಟಿಕೆಯ ಕರಾಳ ಮುಖ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ವಿಡಿಯೋ ಒಂದು ವೇಶ್ಯಾವಾಟಿಕೆ ದಂಧೆಯ ಕರಾಳ ಮುಖವನ್ನು ತೆರೆದಿಟ್ಟಿದೆ. ಈ ಜಾಲದಲ್ಲಿ ಸಿಲುಕಿ ನಲುಗಿದ್ದ ಜಮ್ಮು ಕಾಶ್ಮೀರದ ಯುವತಿಯೊಬ್ಬಳು ವಿಡಿಯೋವನ್ನು ಹಾಕಿದ್ದು, ವೇಶ್ಯಾವಾಟಿಕೆ ದಂಧೆ ಯಾವ ರೀತಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಹೇಳಿದ್ದಾಳೆ.

ಕುಲ್ಗಾಂಮ್ ನ ಶಬ್ಬೀರ್ ಅಹಮ್ಮದ್ ಹಾಗೂ ಮತ್ತೊಬ್ಬ ಮಹಿಳೆ ಈ ದಂಧೆಯ ಕಿಂಗ್ ಪಿನ್ ಗಳೆಂದು ಯುವತಿ ಆರೋಪಿಸಿದ್ದು, ಇವರುಗಳಿಗೆ ಹಲವು ರಾಜಕಾರಣಿಗಳು ಹಾಗೂ ಕೆಲ ಪೊಲೀಸ್ ಅಧಿಕಾರಿಗಳ ಬೆಂಬಲವೂ ಇದೆ ಎಂದಿದ್ದಾಳೆ.

ತನ್ನನ್ನು ಪರಿಚಯಿಸಿಕೊಂಡಿದ್ದ ಮಹಿಳೆಯ ಪುತ್ರಿ ಒಮ್ಮೆ ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮತ್ತು ಬರಿಸುವ ಪದಾರ್ಥ ನೀಡಿದ ಬಳಿಕ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿದ್ದ. ಇದೆಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕುವ ಮೂಲಕ ತನ್ನನ್ನು ಈ ದಂಧೆಗೆ ಬಳಸಿಕೊಳ್ಳಲಾಯಿತು ಎಂದಿದ್ದಾಳೆ. ಒಮ್ಮೆ ಚುನಾಯಿತ ಪ್ರತಿನಿಧಿಯೊಬ್ಬರನ್ನು ಭೇಟಿಯಾಗುವಂತೆ ತನಗೆ ಸೂಚಿಸಲಾಗಿತ್ತಾದರೂ ತಾನದನ್ನು ತಿರಸ್ಕರಿಸಿದೆ ಎಂದು ಯುವತಿ ಹೇಳಿಕೊಂಡಿದ್ದು, ತನ್ನಂತೆ ಇನ್ನೂ ಹಲವು ಯುವತಿಯರು ಈ ಜಾಲಕ್ಕೆ ಬಲಿಪಶುವಾಗಿದ್ದಾರೆಂದು ಹೇಳಿಕೊಂಡಿದ್ದಾಳೆ. ಇದೀಗ ಯುವತಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...