alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಿಬ್ಬರನ್ನು ಬಲಿ ಪಡೆದ ಜಲ್ಲಿಕಟ್ಟು ಕ್ರೀಡೆ

ಮಕರ ಸಂಕ್ರಾಂತಿ ವೇಳೆ ನಡೆಯುವ ಪ್ರಸಿದ್ಧ ಜಲ್ಲಿಕಟ್ಟು ಕ್ರೀಡೆ ಮತ್ತೆರಡು ಬಲಿ ಪಡೆದಿದೆ. ಈವರೆಗೆ ಜಲ್ಲಿಕಟ್ಟು ಕ್ರೀಡೆ ವೇಳೆ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. 79ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಜನವರಿ 16ರಂದು ತಮಿಳುನಾಡಿನ ಶಿವಗಂಗೈನಲ್ಲಿ ಏರ್ಪಡಿಸಿದ್ದ ಜಲ್ಲಿಕಟ್ಟು ಸ್ಪರ್ಧೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.

ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಕೆಳಗೆ ಬಿದ್ದ ಯುವಕರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಾಯಕಾರಿ ಗ್ರಾಮೀಣ ಆಟವೆಂದೇ ಜಲ್ಲಿಕಟ್ಟು ಹೆಸರು ಪಡೆದಿದೆ. ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಸ್ಪರ್ಧೆಗೆ ನಿಷೇಧ ಹೇರಿತ್ತು. ಆದ್ರೆ ತೀವ್ರ ಪ್ರತಿಭಟನೆ ನಂತ್ರ ರಾಜ್ಯ ಸರ್ಕಾರ ನಿಷೇಧ ತೆರವುಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು.

ಮೂರು ವರ್ಷಗಳ ನಂತ್ರ ಮತ್ತೆ ಈ ವರ್ಷ ಜಲ್ಲಿಕಟ್ಟು ಸ್ಪರ್ಧೆ ಶುರುವಾಗಿದೆ. ಸ್ಪರ್ಧೆ ಮೂರರಿಂದ-ನಾಲ್ಕು ದಿನ ವಿವಿದೆಡೆ ನಡೆಯುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...