alex Certify
ಕನ್ನಡ ದುನಿಯಾ       Mobile App
       

Kannada Duniya

ಜಾರಿಯಾಯ್ತು ಸುಗ್ರೀವಾಜ್ಞೆ: ನಾಳೆಯೇ ಜಲ್ಲಿಕಟ್ಟು

tn-jalli-ni

ಚೆನ್ನೈ: ಪೊಂಗಲ್ ಹಬ್ಬದಿಂದ ಜಲ್ಲಿಕಟ್ಟು ಪರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ.

ರಾಜ್ಯಪಾಲ ವಿದ್ಯಾಸಾಗರ ರಾವ್ ಸುಗ್ರೀವಾಜ್ಞೆ ಹೊರಡಿಸಿದ್ದು, ನಾಳೆಯೇ ತಮಿಳುನಾಡಿನ 3 ಸ್ಥಳಗಳಲ್ಲಿ ಜಲ್ಲಿಕಟ್ಟು ನಡೆಯಲಿದೆ.

ಮಧುರೈ ಜಿಲ್ಲೆಯ ಆವಣ್ಯಪುರಂ, ಆಲಂಗನೂರು, ಪಾಲಮೇಡುವಿನಲ್ಲಿ ನಾಳೆಯೇ ಜಲ್ಲಿಕಟ್ಟು ನಡೆಯಲಿದ್ದು, ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ.

ಜಲ್ಲಿಕಟ್ಟು ಆಯೋಜನೆಗೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಮಧುರೈ ಜಿಲ್ಲಾಧಿಕಾರಿ ವೀರ ರಾಘವೇಂದ್ರರಾವ್ ಅವರಿಗೆ ಸೂಚನೆ ನೀಡಿರುವ ಪನ್ನೀರ್ ಸೆಲ್ವಂ ಇಂದು ರಾತ್ರಿಯೇ ಮಧುರೈಗೆ ತೆರಳಲಿದ್ದಾರೆ.

ಸುಪ್ರೀಂ ಕೋರ್ಟ್, ಜಲ್ಲಿಕಟ್ಟಿಗೆ ನಿಷೇಧ ಹೇರಿದ್ದು, ಸುಗ್ರೀವಾಜ್ಞೆ ಮೂಲಕ ಸ್ಪರ್ಧೆ ಆಯೋಜನೆಗೆ ಅವಕಾಶ ಮಾಡಿಕೊಡಲಾಗಿದೆ. ಸುಗ್ರೀವಾಜ್ಞೆ ಹೊರಡಿಸಿರುವ ವಿಚಾರ ಪ್ರಸಾರವಾಗುತ್ತಿದ್ದಂತೆ ತಮಿಳುನಾಡಿನ ಜನ ಸಂಭ್ರಮಾಚರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...