alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ಸಾವಿನ ಬಗ್ಗೆ ಹೊಸ ‘ರಹಸ್ಯ’ ಬಿಚ್ಚಿಟ್ಟ ಚಾಲಕ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ತನಿಖೆ ಮತ್ತಷ್ಟು ರಹಸ್ಯವಾಗ್ತಿದೆ. ಶಶಿಕಲಾ ಹಾಗೂ ಜಯಲಲಿತಾರಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ನಂತ್ರ ಈಗ ಜಯಲಲಿತಾರ ಕಾರು ಚಾಲಕರ ಹೇಳಿಕೆ ಹೊರಬಿದ್ದಿದೆ. ಚಾಲಕ ಹೊಸ ರಹಸ್ಯವನ್ನು ಹೊರ ಹಾಕಿದ್ದಾರೆ.

1991 ರಿಂದ ಜಯಲಲಿತಾ ಕಾರು ಚಾಲಕರಾಗಿದ್ದ ಕನನ್, ಜಯಲಲಿತಾ ರೂಮಿಗೆ ಹೋದಾಗ ಅವ್ರು ಖುರ್ಚಿಯಲ್ಲಿ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿದ್ದರು ಎಂದಿದ್ದಾರೆ. ಚಾಲಕನ ಹೇಳಿಕೆ ಹಾಗೂ ಶಶಿಕಲಾ ಹಾಗೂ ವೈದ್ಯರ ಹೇಳಿಕೆಗೆ ತುಂಬಾ ವ್ಯತ್ಯಾಸ ಕಾಣ್ತಿದೆ. ಶಶಿಕಲಾ ಹಾಗೂ ವೈದ್ಯರು ಜಯಲಲಿತಾ ಹಾಸಿಗೆ ಮೇಲೆ ಪ್ರಜ್ಞೆ ತಪ್ಪಿದ್ದರು ಎಂದು ಹೇಳಿಕೆ ನೀಡಿದ್ದರು. ಚಾಲಕ ಹಾಗೂ ಭದ್ರತಾ ಸಿಬ್ಬಂದಿ ಖುರ್ಚಿಯಲ್ಲಿ ಕೂರಿಸಲು ಯತ್ನಿಸಿದ್ರು ಆದ್ರೆ ಸಾಧ್ಯವಾಗಲಿಲ್ಲ ಎಂದಿದ್ದರು.

ಅಮ್ಮನ ರೂಮಿಗೆ ಹೋದಾಗ ಜಯಲಲಿತಾ ಖುರ್ಚಿ ಮೇಲೆ ಪ್ರಜ್ಞಾವಸ್ಥ ಸ್ಥಿತಿಯಲ್ಲಿದ್ದರು. ಕೆಲ ದಾಖಲೆಗಳು ಹರಡಿಕೊಂಡಿದ್ದವು. ಪೆನ್ನಿನ ಕ್ಯಾಪ್ ತೆರೆದಿತ್ತು. ಖುರ್ಚಿ ಸಮೇತ ಅವ್ರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಶಶಿಕಲಾ ಹೇಳಿದ್ರು. ಮೆಟ್ಟಿಲು ಇಳಿಯುವಾಗ ಜಯಲಲಿತಾ ವಾಲಿದ್ದರಿಂದ ಸ್ಟ್ರಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯ್ತು ಎಂದು ಕನನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...