alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಕಾಟ ತಾಳದೇ ಪತಿ ಮಾಡಿದ್ದೇನು ಗೊತ್ತಾ..?

ಜೈಪುರ್: ಪತ್ನಿಯ ಮಿತಿಮೀರಿದ ಕಾಟದಿಂದ ಬೇಸತ್ತ ವ್ಯಕ್ತಿಯೊಬ್ಬ ಮಾಡಿದ ಕೆಲಸ ನೋಡಿದ್ರೇ ನಗದೇ ಇರಲಾರಿರಿ. ಅಂದ ಹಾಗೇ ಈತ ಪತ್ನಿಯ ಕಾಟ ತಾಳದೇ ಜೈಲಿಗೆ ಹೋಗಿದ್ದಾನೆ. ಸುಮ್ಮನೆ ಜೈಲಿಗೆ ಹೋಗುವಂತಿಲ್ಲವಲ್ಲ, ಅದಕ್ಕಾಗಿ ಎ.ಸಿ.ಪಿ. ಕೆನ್ನೆಗೆ ಬಾರಿಸಿ, ಜೈಲಿನ ದಾರಿ ತುಳಿದಿದ್ದಾನೆ.

ಜೈಪುರ್ ಶಿಪ್ರಾ ಪಾತ್ ಪೊಲೀಸ್ ಠಾಣೆ ವ್ಯಾಪ್ತಿಯ 30 ವರ್ಷದ ಯೋಗೀಶ್ ಕೋಲ್ಯಾ ಎಂಬಾತನೇ ಇಂತಹ ಕೆಲಸ ಮಾಡಿದ ಮಹಾನುಭಾವ.

ಮನೆಯಿಂದ ಸೀದಾ ಪೊಲೀಸ್ ಠಾಣೆಗೆ ಬಂದ ಯೋಗೀಶ್, ಪತ್ನಿಯ ಕಾಟ ತಾಳದೇ ಆಕೆಗೆ ಹೊಡೆದಿದ್ದೇನೆ. ನನ್ನನ್ನು ಜೈಲಿಗೆ ಹಾಕಿ ಎಂದು ಮನವಿ ಮಾಡಿದ್ದಾನೆ.

ಕೆಲ ಸಮಯದಲ್ಲೇ ಆತನ ಪತ್ನಿಯೂ ಆಗಮಿಸಿ, ಗಂಡ ಹಲ್ಲೆ ಮಾಡಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಕುಟುಂಬ ಕಲಹದಿಂದ ಪತಿ, ಪತ್ನಿ ಠಾಣೆಗೆ ಬಂದಿದ್ದನ್ನು ಅರಿತ ಪೊಲೀಸರು, ಇಬ್ಬರಿಗೂ ಸಮಾಧಾನಪಡಿಸಿದ್ದಾರೆ. ಆದರೆ, ದಂಪತಿ ನಡುವಿನ ಜಗಳ ಕಡಿಮೆಯಾಗಿಲ್ಲ.

ಮಾನ್ ಸರೋವರ್ ಎ.ಸಿ.ಪಿ. ದೇಶ್ ರಾಜ್ ಯಾದವ್ ಠಾಣೆಯಲ್ಲಿದ್ದ ಯೋಗೀಶ್ ಗೆ ಬುದ್ಧಿ ಮಾತು ಹೇಳಿದ್ದಾರೆ. ಆದರೆ, ಇದಕ್ಕೊಪ್ಪದ ಯೋಗೀಶ್ ನನ್ನನ್ನು ಜೈಲಿಗೆ ಹಾಕಿ ಎಂದು ಎ.ಸಿ.ಪಿ.ಗೆ ಪಂಚ್ ಕೊಟ್ಟಿದ್ದಾನೆ.

ಆಗ ಪೊಲೀಸರು ಯೋಗೀಶ್ ಗೆ ಸರಿಯಾಗಿ ಬಾರಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...