alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ದರೋಡೆ ತಪ್ಪಿಸಿದ ಪೊಲೀಸ್ ಪೇದೆ

ದೇಶದ ಅತಿ ದೊಡ್ಡ ದರೋಡೆ ಯತ್ನವನ್ನು ಜೈಪುರದಲ್ಲಿ ಪೊಲೀಸ್ ಪೇದೆಯೊಬ್ಬ ವಿಫಲಗೊಳಿಸಿದ್ದಾನೆ. ಬ್ಯಾಂಕ್ ನಿಂದ 925 ಕೋಟಿ ರೂಪಾಯಿ ಲೂಟಿ ಮಾಡಲು ದುಷ್ಕರ್ಮಿಗಳು ಸ್ಕೆಚ್ ಹಾಕಿದ್ದರು. ಮುಖಕ್ಕೆ ಮಾಸ್ಕ್ ಧರಿಸಿ, ಮಾರಕಾಸ್ತ್ರಗಳೊಂದಿಗೆ 13 ದರೋಡೆಕೋರರು ಬ್ಯಾಂಕ್ ಬಳಿ ಬಂದಿದ್ರು.

ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ ಶಟರ್ ತೆರೆಯಲು ಪ್ರಯತ್ನಿಸುತ್ತಿದ್ರು. ಈ ಶಬ್ಧ ಕೇಳಿ ಪೊಲೀಸ್ ಪೇದೆ ಸೀತಾರಾಮ್ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳ್ತಿದ್ದಂತೆ ದುಷ್ಕರ್ಮಿಗಳು ಹೆದರಿ ಅಲ್ಲಿಂದ ಪರಾರಿಯಾದ್ರು. ಈ ಬಗ್ಗೆ ಪೇದೆ ಠಾಣೆಗೂ ಮಾಹಿತಿ ನೀಡಿದ್ದ.

ಕೆಲ ಹೊತ್ತಿನಲ್ಲೇ ಇನ್ನೊಂದಷ್ಟು ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು. ಅದು ಪ್ರಮುಖ ಶಾಖೆಯಾಗಿದ್ದರಿಂದ ಅಲ್ಲಿ ಹೆಚ್ಚಿನ ಹಣ ಸಂಗ್ರಹಿಸಿ ಇಡಲಾಗಿತ್ತು. ನಂತರ ಅದನ್ನು ಉಳಿದ ಶಾಖೆಗಳಿಗೆ ಕಳುಹಿಸಿಕೊಡಲಾಗುತ್ತದೆ. ದರೋಡೆಕೋರರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ರೆ 925 ಕೋಟಿ ರೂಪಾಯಿ ದುಷ್ಕರ್ಮಿಗಳ ಕೈಸೇರುತ್ತಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...