alex Certify
ಕನ್ನಡ ದುನಿಯಾ       Mobile App
       

Kannada Duniya

ಹಂತಕನನ್ನು ಬೆಂಬಲಿಸಲು ನೀರಿನ ಟ್ಯಾಂಕ್ ಏರಿದ ಭೂಪ

 

26 ವರ್ಷದ ಯುವಕ ಮೊಹಮ್ಮದ್ ಅಫ್ರಾಜುಲ್ ನನ್ನು ಭೀಕರವಾಗಿ ಹತ್ಯೆ ಮಾಡಿರುವ ಶಂಭುಲಾಲ್ ರೆಗಾರ್ ಎಂಬಾತನಿಗೆ ಬೆಂಬಲ ವ್ಯಕ್ತಪಡಿಸಿ ಜೈಪುರದಲ್ಲಿ ವ್ಯಕ್ತಿಯೊಬ್ಬ ನೀರಿನ ಟ್ಯಾಂಕ್ ಏರಿದ್ದ. ಅಂಶುಲ್ ದಾಢಿಚ್ ಎಂಬಾತ ಅಲ್ಲಿ ನಿಂತುಕೊಂಡು ಶಂಭುಲಾಲ್ ಪರ ಘೋಷಣೆ ಕೂಗಿದ್ದಾನೆ.

ನಂತರ ಪೊಲೀಸರು ಬಂದು ಆತನನ್ನು ಬಂಧಿಸಿ ಕರೆದೊಯ್ದರು. ಕೌಟುಂಬಿಕ ಸಮಸ್ಯೆಯಿಂದ ನೀರಿನ ಟ್ಯಾಂಕ್ ಹತ್ತಿದ್ದೆ ಅಂತಾ ಪೊಲೀಸರ ಬಳಿ ಅಂಶುಲ್ ಹೇಳಿದ್ದಾನೆ. ಮಧ್ಯಾಹ್ನದ ವೇಳೆಗೆ ಈತ ಕನ್ವರ್ ನಗರದಲ್ಲಿರೋ ನೀರಿನ ಟ್ಯಾಂಕ್ ಮೇಲಕ್ಕೆ ಹತ್ತಿ ನಿಂತಿದ್ದ.

ಶಂಭುಲಾಲ್ ನನ್ನು ಜೈಲಿನಿಂದ ಬಿಡುಗಡೆ ಮಾಡಿ, ಇಲ್ಲದೇ ಹೋದ್ರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಕೂಗುತ್ತಿದ್ದ. ಭಾರತದಲ್ಲಿ ಇರಬೇಕು ಅಂದ್ರೆ ವಂದೇ ಮಾತರಂ ಹೇಳಿ ಅಂತಾನೂ ಕೂಗಿಕೊಂಡಿದ್ದಾನೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...