alex Certify
ಕನ್ನಡ ದುನಿಯಾ       Mobile App
       

Kannada Duniya

37 ವರ್ಷ ಜೈಲಲ್ಲಿದ್ದವನಿಗೆ ವಯಸ್ಸಿನ ಬಗ್ಗೆ ಅರಿವಾಯ್ತು

ನವದೆಹಲಿ: ಬರೋಬ್ಬರಿ 37 ವರ್ಷ ಜೈಲಲ್ಲೇ ಶಿಕ್ಷೆ ಅನುಭವಿಸಿದ ವ್ಯಕ್ತಿಯೊಬ್ಬನಿಗೆ ತನ್ನ ವಯಸ್ಸಿನ ಅರಿವಾಗಿದ್ದು, ಬಾಲಾಪರಾಧಿ ವಿನಾಯಿತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ.

1979 ರಲ್ಲಿ ಘಟನೆ ನಡೆದಾಗ 16 ವರ್ಷದವನಾಗಿದ್ದೆ ಎಂದು ವಿಜಯ್ ಪಾಲ್(57) ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಶಿಕ್ಷೆಯಿಂದ ವಿನಾಯಿತಿ ಕೋರಿದ್ದಾರೆ.

ಕೊಲೆ ಪ್ರಕರಣವೊಂದರಲ್ಲಿ ವಿಜಯ್ ಪಾಲ್ ಗೆ 1980 ಡಿಸೆಂಬರ್ 20 ರಂದು ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಲಹಬಾದ್ ಹೈಕೋರ್ಟ್ ನಲ್ಲಿ ಮೇಲ್ಮನವಿಯ ವಿಚಾರಣೆ ನಡೆದು 2003 ರ ಸೆಪ್ಟಂಬರ್ 4 ರಂದು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಜೀವಾವಧಿ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು 2004 ರಲ್ಲಿ ವಜಾಗೊಳಿಸಲಾಗಿತ್ತು.

ಇದೆಲ್ಲಾ ಆದ ನಂತರ ವಿಜಯ್ ಪಾಲ್ ಗೆ ತನ್ನ ವಯಸ್ಸಿನ ಅರಿವಾಗಿದೆ. ಬಾಲ ನ್ಯಾಯ ಕಾಯ್ದೆಯ ಪ್ರಕಾರ, ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ತೀರ್ಪು ನೀಡಿದ ನಂತರದಲ್ಲಿ ಅಪರಾಧಿ ವಯಸ್ಸಿನ ಕಾರಣವನ್ನು ನೀಡಿ ವಿನಾಯಿತಿ ಪಡೆಯಬಹುದಾಗಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ವಿಜಯ್ ಪಾಲ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ವಿಜಯ್ ಪಾಲ್ ಗೆ 16 ವರ್ಷ 11 ತಿಂಗಳು 9 ದಿನವಾಗಿತ್ತು ಎಂದು ಉತ್ತರ ಪ್ರದೇಶದ ಹರ್ದೋಯಿಯ ಶಾಲಾ ಮುಖ್ಯ ಶಿಕ್ಷಕರು ಪ್ರಮಾಣ ಪತ್ರ ನೀಡಿದ್ದಾರೆ. ಅರ್ಜಿದಾರನ ಪ್ರತಿನಿಧಿಯಾಗಿ ಸುಪ್ರೀಂ ಕೋರ್ಟ್ ನಿಂದ ನೇಮಕವಾಗಿದ್ದ ವಕೀಲ ದೀಪಕ್ ಕುಮಾರ್ ಕೆನಾ ವರದಿ ನೀಡಿದ್ದು, ಕೃತ್ಯವೆಸಗಿದ ಸಂದರ್ಭದಲ್ಲಿ ವಿಜಯ್ ಪಾಲ್ ಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಾಗಿತ್ತು ಎಂದು ಹೇಳಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 4 ವಾರದೊಳಗೆ ಉತ್ತರ ನೀಡಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...