alex Certify
ಕನ್ನಡ ದುನಿಯಾ       Mobile App
       

Kannada Duniya

10 ಕಾರುಗಳಿಗೆ ಡಿಕ್ಕಿ ಹೊಡೆದಿದೆ ಜಾಗ್ವಾರ್

ಮುಂಬೈನ ಅಂಧೇರಿಯಲ್ಲಿ ಅಜಾಗರೂಕತತೆಯಿಂದ ಜಾಗ್ವಾರ್ ಕಾರನ್ನ ಚಲಾಯಿಸಿದ ವ್ಯಕ್ತಿಯೊಬ್ಬ ಸರಣಿ ಅಪಘಾತವನ್ನು ಮಾಡಿ ನಾಲ್ವರನ್ನು ಗಾಯಗೊಳಿಸಿದ್ದಾನೆ. ಘಟನೆಯ ಸಂಬಂಧ ಕಾರು ಚಾಲಕನನ್ನ ಅಂಧೇರಿ ಪೊಲೀಸರು ಬಂಧಿಸಿದ್ದಾರೆ.

ಜನ ವಸತಿ ಪ್ರದೇಶದಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿದ ಕಾರು ಮನೆಯೊಂದರ ಗೇಟ್ ಗೆ ಗುದ್ದಿ ಕೆಟ್ಟು ನಿಂತಿದೆ. ನಾಲ್ವರು ಪಾದಚಾರಿಗಳು ಗಾಯಗೊಂಡಿದ್ದಾರೆ. ಅಲ್ಲದೇ 10 ಕಾರುಗಳು ಹಾನಿಗೊಳಗಾಗಿವೆ. ಈ ಸಂದರ್ಭದಲ್ಲಿ ಸ್ಥಳದಿಂದ ಪರಾರಿಯಾಗೋಕೆ ಯತ್ನಿಸಿದ ಹಿತೇಶ್ ಗೋಲ್ಚಾ ಎಂಬ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನನ್ನ ಚಿಕಿತ್ಸೆಗಾಗಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾತ್ರಿ ಸುಮಾರು 8.30 ರಿಂದ 9 ಗಂಟೆಯ ವೇಳೆಗೆ ಈ ಪ್ರಕರಣ ನಡೆದಿದೆ. ಜಾಗ್ವಾರ್ ವಾಹನವೊಂದು ಅಡ್ಡಾದಿಡ್ಡಿಯಾಗಿ ಚಲಿಸುತ್ತಿದೆ ಅನ್ನೋ ದೂರು ಪೊಲೀಸರಿಗೆ ಸ್ಥಳೀಯರಿಂದ ಸಿಕ್ಕಿತ್ತು. ಆನಂತರದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಸುರೇಶ್ ನಗರ್ ಸಮೀಪದಲ್ಲಿ ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ವಾಹನ ಚಾಲಕನ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...