alex Certify
ಕನ್ನಡ ದುನಿಯಾ       Mobile App
       

Kannada Duniya

8 ಜನರನ್ನು ಬಲಿ ಪಡೆದಿದೆ ಕಬ್ಬಿಣ ತುಂಬಿದ್ದ ಲಾರಿ

ಜಬಲ್ಪುರದಲ್ಲಿ ಕಬ್ಬಿಣದ ರಾಡ್ ಹೊತ್ತೊಯ್ಯುತ್ತಿದ್ದ ಲಾರಿಯೊಂದು 8 ಜನರನ್ನು ಬಲಿ ಪಡೆದಿದೆ. 3 ಮನೆಗಳನ್ನು ಲಾರಿ ಧ್ವಂಸಗೊಳಿಸಿದ್ದು, ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಬಲ್ಪುರ-ಮಾಂಡ್ಲಾ ರಸ್ತೆಯಲ್ಲಿ ಅಪಘಾತ ನಡೆದಿದ್ದು, ಪೊಲೀಸರು ಲಾರಿ ಚಾಲಕನನ್ನು ಬಂಧಿಸಿದ್ದಾರೆ.

16 ಚಕ್ರಗಳ ಈ ಲಾರಿ ಛತ್ತೀಸ್ ಗಢದಿಂದ ಆಗಮಿಸಿತ್ತು. ಅಪಘಾತದ ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ. ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಅಂತಾ ಹೇಳಲಾಗ್ತಿದೆ. ಇನ್ನೊಂದೆಡೆ ಬಿಹಾರದ ಪುರ್ನೆಯಾ ಜಿಲ್ಲೆಯಲ್ಲಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿ, ಲಾರಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

10ನೇ ತರಗತಿಯಲ್ಲಿ ಓದುತ್ತಿದ್ದ ರಾಜೇಶ್ ಯಾದವ್ ಮೃತ ವಿದ್ಯಾರ್ಥಿ. ಈತ ಸೈಕಲ್ ನಲ್ಲಿ ತೆರಳುತ್ತಿದ್ದ. ಹಿಂದಿನಿಂದ ವೇಗವಾಗಿ ಬಂದ ಟ್ರಕ್, ಸೈಕಲ್ ಗೆ ಡಿಕ್ಕಿ ಹೊಡೆದಿದೆ. ರಾಜೇಶ್ ಲಾರಿ ಚಕ್ರದಡಿ ಸಿಕ್ಕು ಮೃತಪಟ್ಟಿದ್ದಾರೆ. ಘಟನೆಯನ್ನು ಖಂಡಿಸಿ ಸಾರ್ವಜನಿಕರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...